ಈ ನಡುವೆ ತೈವಾನ್ ಚೀನಾದ ಭಾಗ ಎಂದು ಚೀನಾದ ವಿದೇಶಾಂಗ ಇಲಾಖೆ ವಕ್ತಾರ ವಾಂಗ್ ವೆನ್‌ಬಿನ್ ಬೀಜಿಂಗ್‌ನಲ್ಲಿ ಹೇಳಿದ್ದು, ಸ್ಟ್ರೈಟ್ ಎನ್ನುವ ಯಾವುದೇ ರೇಖೆ ಇಲ್ಲ ಎಂದಿದ್ದಾರೆ.ಎರಡೂ ರಾಷ್ಟ್ರಗಳ ಯುದ್ಧವಿಮಾನಗಳುತೈವಾನ್ ಸ್ಟ್ರೈಟ್ ರೇಖೆಯನ್ನು ದಾಟಿ ಹೋಗುವುದಿಲ್ಲ. ಈ ಕುರಿತು ಎರಡೂ ರಾಷ್ಟ್ರಗಳ ನಡುವೆ ಯಾವುದೇ ಅಧಿಕೃತ ಒಪ್ಪಂದಗಳು ಇಲ್ಲದೇ ಇದ್ದರೂ, ಅನಧಿಕೃತವಾಗಿ ಇದನ್ನು ಪಾಲಿಸಿಕೊಂಡು ಬರಲಾಗುತ್ತಿದೆ.