ನವದೆಹಲಿ: ಶಕ್ತಿಯುತ ಎಂಜಿನ್, ಅಧಿಕ ಭಾರ ಹೊರುವ ಸಾಮರ್ಥ್ಯ ಸೇರಿದಂತೆಹಲವು ವೈಶಿಷ್ಟ್ಯ ಹೊಂದಿರುವ ‘ತೇಜಸ್ ಮಾರ್ಕ್ 2‘ ಯುದ್ಧವಿಮಾನಗಳ ವಿನ್ಯಾಸಕ್ಕೆ ಮುಂದಿನ ವರ್ಷ ಚಾಲನೆ ನೀಡಲಾಗುವುದು ಎಂದು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಚೇರ್ಮನ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಆರ್.ಮಾಧವನ್ ಹೇಳಿದ್ದಾರೆ.
ಈ ಯುದ್ಧವಿಮಾನಗಳ ಟ್ರಯಲ್ ಅನ್ನು 2023ರಲ್ಲಿ ಆರಂಭಿಸಲಾಗುವುದು. ಇವುಗಳ ಉತ್ಪಾದನೆಯನ್ನು 2025ರಲ್ಲಿ ಆರಂಭಿಸಲಾಗುವುದು ಎಂದೂ ಅವರು ತಿಳಿಸಿದ್ದಾರೆ.
ಹೆಚ್ಚು ದೂರದವರೆಗೆ ಚಿಮ್ಮುವ ಸಾಮರ್ಥ್ಯ, ಅತ್ಯುತ್ತಮ ನಿರ್ವಹಣೆ, ಧಾರಣೆಗೆ ಅವಕಾಶ, ಅತ್ಯಾಧುನಿಕ ಯುದ್ಧಕೌಶಲ ವ್ಯವಸ್ಥೆ, ಏರೋನಾಟಿಕ್ಸ್ ಕ್ಷೇತ್ರದಲ್ಲಿಯೇ ಉತ್ಕೃಷ್ಟವಾದ ತಂತ್ರಜ್ಞಾನವನ್ನು ಈ ಯುದ್ಧವಿಮಾನಗಳಲ್ಲಿ ಅಳವಡಿಸಲಾಗುವುದು ಎಂದು ತಿಳಿಸಿದ್ದಾರೆ.
ಹೆಚ್ಚು ದೂರದವರೆಗೆ ಚಿಮ್ಮುವ ಹಾಗೂ ಅಧಿಕ ಭಾರ ಹೊರುವ ಸಾಮರ್ಥ್ಯಗಳಿಂದಾಗಿ ಈ ಯುದ್ಧವಿಮಾನಗಳು (ತೇಜಸ್ ಮಾರ್ಕ್–2) ಈ ಹಿಂದಿನ ಅವತರಣಿಕೆಗಳಾದ ತೇಜಸ್ ಮಾರ್ಕ್–1ಎ ಗಿಂತ ಅತ್ಯುತ್ತಮವಾಗಿರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಾಯುಪಡೆ ₹ 48,000 ಕೋಟಿ ವೆಚ್ಚದಲ್ಲಿ 73 ಯುದ್ಧವಿಮಾನಗಳನ್ನು ಖರೀದಿ ಮಾಡುತ್ತಿದ್ದು, ಈ ಸಂಬಂಧ ಜ. 13ರಂದು ಎಚ್‌ಎಎಲ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.