ಹೈದರಾಬಾದ್: ತೆಲಂಗಾಣಕ್ಕೆ ಭೇಟಿ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಟಿಆರ್ಎಸ್ ಕಾರ್ಯಾಧ್ಯಕ್ಷ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಕೆ.ಟಿ.ರಾಮರಾವ್ ಹರಿಹಾಯ್ದಿದ್ದಾರೆ.

'ಪಗಡೆ ಕ್ರಿಕೆಟಿಗ'ನ ತಂದೆ ತೆಲಂಗಾಣಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಇತ್ತೀಚೆಗಷ್ಟೇ ಮುನುಗೋಡು ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೆ.ರಾಜ್ಗೋಪಾಲ್ ರೆಡ್ಡಿ ಅವರ ಪ್ರಚಾರಕ್ಕಾಗಿ ಅಮಿತ್ ಶಾ ಬಂದಿದ್ದಾರೆ. ರೆಡ್ಡಿ ಅವರ ಸಹೋದರ ಸಂಸದರಾಗಿದ್ದಾರೆ. ಪತ್ನಿ ಎಂಎಲ್ಸಿ ಆಗಿದ್ದಾರೆ. ಇಂತಹ ಸಜ್ಜನರಿಗಾಗಿ ಪ್ರಚಾರ ಮಾಡಲು ಗಣ್ಯರು(ಅಮಿತ್ ಶಾ) ಆಗಮಿಸಿದ್ದಾರೆ’ ಎಂದು ವ್ಯಂಗ್ಯವಾಡಿದ್ದಾರೆ.

ಮುನುಗೋಡು ವಿಧಾನಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪ ಚುನಾವಣೆಯಲ್ಲಿ ಕೆ.ರಾಜಗೋಪಾಲ ರೆಡ್ಡಿ ಬಿಜೆಪಿಯಿಂದ ಸ್ಪರ್ಧಿಸಲಿದ್ದಾರೆ.

ಶ್ರೇಯಾಂಕಗಳ ಮೂಲಕ ಮೇಲೇರಿದ ಬಿಸಿಸಿಐ ಕಾರ್ಯದರ್ಶಿ ‘ಪಗಡೆ ಕ್ರಿಕೆಟಿಗ’ನ ತಂದೆ ಇಂದು ತೆಲಂಗಾಣಕ್ಕೆ ಭೇಟಿ ನೀಡಿದ್ದಾರೆ. ಇಂತವರು ನಮಗೆ ಪರಿವಾರವಾದದ ಕುರಿತು ಉಪನ್ಯಾಸ ನೀಡುತ್ತಾರೆ ಎಂದು ರಾಮರಾವ್ ಟೀಕಿಸಿದ್ದಾರೆ.

ಬಿಲ್ಕಿಸ್ ಬಾನು ಅತ್ಯಾಚಾರಿಗಳನ್ನು ಬಿಡುಗಡೆ ಮಾಡಿರುವ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಕೆಟಿಆರ್ ಪ್ರತ್ಯೇಕ ಟ್ವೀಟ್ ಮಾಡಿದ್ದಾರೆ.

‘ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳನ್ನು ಬಿಡುಗಡೆ ಮಾಡಲು ಗುಜರಾತ್ ಸರ್ಕಾರ ಏಕೆ ನಿರ್ಧರಿಸಿತು? ಎಂಬ ಪ್ರಶ್ನೆಯನ್ನು ಅಮಿತ್ ಶಾ ಅವರಿಗೆ ಕೇಳಲು ತೆಲಂಗಾಣದ ಜನರು ಉತ್ಸುಕರಾಗಿದ್ದಾರೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.