ಗುರುವಾರ , ಮೇ 13, 2021
39 °C

ಆಮ್ಲಜನಕ ಹೊತ್ತು ಮಹಾರಾಷ್ಟ್ರಕ್ಕೆ ತೆರಳಿದ ’ಆಕ್ಸಿಜನ್ ಎಕ್ಸ್‌ಪ್ರೆಸ್’ ರೈಲು

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತೀಯ ರೈಲ್ವೆಯ ಆಕ್ಸಿಜನ್‌ ಎಕ್ಸ್‌ಪ್ರೆಸ್‌ ರೈಲು ಏಳು ಟ್ಯಾಂಕರ್‌ಗಳಲ್ಲಿ ಆಮ್ಲಜನಕ ಹೊತ್ತುಕೊಂಡು ಗುರುವಾರ ತಡರಾತ್ರಿ ವಿಶಾಖಪಟ್ಟಣದಿಂದ ಮಹಾರಾಷ್ಟ್ರಕ್ಕೆ ಹಿಂತಿರುಗಿದೆ.

ಈ ಕುರಿತು ಕೇಂದ್ರ ರೈಲ್ವೆ ಸಚಿವ ಪೀಯುಷ್‌ ಗೋಯಲ್‌ ಅವರು ಆಕ್ಸಿಜನ್‌ ಎಕ್ಸ್‌ಪ್ರೆಸ್‌ ಸಂಚರಿಸುತ್ತಿರುವ ವಿಡಿಯೊವನ್ನು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

‘ರೈಲ್ವೆ ಇಲಾಖೆ ದೇಶದ ನಾಗರಿಕರ ಯೋಗಕ್ಷೇಮವನ್ನು ಕಾಪಾಡುವ ನಿಟ್ಟಿನಲ್ಲಿ ಕಷ್ಟದ ಸಂದರ್ಭದಲ್ಲಿ ಎಲ್ಲಾ ಅಗತ್ಯ ಸರಕುಗಳನ್ನು ಸಾಗಿಸುವ ಮೂಲಕ ರಾಷ್ಟ್ರಕ್ಕೆ ಸೇವೆ ಸಲ್ಲಿಸುತ್ತಿದೆ’ ಎಂದು ಗೋಯಲ್‌ ಹೇಳಿದ್ದಾರೆ.

ಆಕ್ಸಿಜನ್‌ ಟ್ಯಾಂಕರ್‌ಗಳನ್ನು ಸಾಗಿಸುವ ಸೌಕರ್ಯಗಳ ವೆಚ್ಚವನ್ನು ಭಾರತೀಯ ಸೇನೆ ಭರಿಸಿದ್ದು, ರೈಲ್ವೆ ಇಲಾಖೆ ನಿರ್ವಹಣೆ ಮಾಡುತ್ತಿದೆ. ಮೊದಲ ಆಕ್ಸಿಜನ್‌ ಎಕ್ಸ್‌ಪ್ರೆಸ್‌ ಸೋಮವಾರ ರಾತ್ರಿ 8.05ಕ್ಕೆ ಕಲಂಬೋಲಿಯಿಂದ ಹೊರಟಿತ್ತು. ಕಲಂಬೋಲಿ ಯಾರ್ಡ್‌ ಮುಂಬೈ ಮಹಾನಗರಿಯಿಂದ 40 ಕಿ.ಮೀ. ದೂರದಲ್ಲಿದೆ.

ಇದನ್ನೂ ಓದಿ... ರೆಮ್‌ಡಿಸಿವಿರ್ ಚುಚ್ಚುಮದ್ದಿಗೆ ಯಾಕಿಷ್ಟು ಬೇಡಿಕೆ? ಇಲ್ಲಿದೆ ತಿಳಿಯಬೇಕಾದ ಮಾಹಿತಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು