ಮಂಗಳವಾರ, ಮಾರ್ಚ್ 2, 2021
19 °C

ಭಯೋತ್ಪಾದಕ ಚಟುವಟಿಕೆಗಳಲ್ಲಿ ಗಮನಾರ್ಹ ಇಳಿಕೆ: ಜಮ್ಮು–ಕಾಶ್ಮೀರ ಡಿಜಿಪಿ

ಎಎನ್‌ಐ‌ Updated:

ಅಕ್ಷರ ಗಾತ್ರ : | |

ಜಮ್ಮು-ಕಾಶ್ಮೀರ: ಕಳೆದೆರಡು ವರ್ಷಗಳಿಗೆ ಹೋಲಿಸಿದರೆ ಭಯೋತ್ಪಾದಕ ಚಟುವಟಿಕೆಗಳಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ದಿಲ್‌ಭಾಗ್ ಸಿಂಗ್ ತಿಳಿಸಿದ್ದಾರೆ.

ಭಯೋತ್ಪಾದಕರ ಸಂಘಟನೆಗಳಿಗೆ ಸೇರುವ ಜನರಲ್ಲಿ ಅಲ್ಪ ಹೆಚ್ಚಳ ಕಂಡುಬಂದರೂ ಶೇಕಡಾ 70ರಷ್ಟು ಮಂದಿಯನ್ನು ಬಂಧಿಸಲು ಅಥವಾ ಹತ್ತಿಕ್ಕಲು ಸಾಧ್ಯವಾಗಿದೆ ಎಂದವರು ಹೇಳಿದರು.

2018 ಮತ್ತು 2019ನೇ ಸಾಲಿಗೆ ಹೋಲಿಸಿದರೆ ಈ ವರ್ಷ ಭಯೋತ್ಪಾದಕ ಚಟುವಟಿಕೆಯಲ್ಲಿ ಗಮನಾರ್ಹ ಕಡಿಮೆಯಾಗಿದೆ. 2019ಕ್ಕೆ ಹೋಲಿಸಿದಾಗ ಭಯೋತ್ಪಾದಕ ಶ್ರೇಣಿಗೆ ಸೇರುವ ಮಂದಿಯಲ್ಲಿ ಅಲ್ಪ ಹೆಚ್ಚಳವಾಗಿದೆ. ಆದರೆ ಶೇಕಡಾ 70ರಷ್ಟು ಭಯೋತ್ಪಾದಕರನ್ನು ಹತ್ತಿಕ್ಕಲು ಸಾಧ್ಯವಾಗಿರುವುದು ಧನಾತ್ಮಕ ಅಂಶವಾಗಿದ್ದು, ಉಗ್ರರ ಉಳಿಯುವಿಕೆ ಅವಧಿ ಕಡಿಮೆಯಾಗಿದೆ ಎಂದು ಹೇಳಿದರು.

ಇದನ್ನೂ ಓದಿ: 

ಗಡಿಯಾಚೆಗಿನ ಭಯೋತ್ಪಾದಕ ಚಟುವಟಿಕೆಗಳಿಗೆ ಪಾಕಿಸ್ತಾನ ನಿರಂತರ ಕುಮ್ಮಕ್ಕು ನೀಡುತ್ತಿರುವ ಹೊರತಾಗಿಯೂ ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಉಗ್ರರ ಒಳನುಸುಳುವಿಕೆ ಪ್ರಕರಣಗಳು ಕಡಿಮೆಯಾಗಿದೆ ಎಂದರು.

ಅವರು ಸ್ಥಳೀಯ ಉಗ್ರರನ್ನು ಅವಲಂಬಿಸಬೇಕಾಗಿತ್ತು. ಇದಕ್ಕಾಗಿ ಶಸ್ತ್ರಾಸ್ತ್ರ, ಸ್ಫೋಟಕ ಹಾಗೂ ಡ್ರೋನ್‌ಗಳ ಮೂಲಕ ಹಣವನ್ನು ಪೂರೈಸಲು ಪ್ರಯತ್ನಿಸಿದರು. ಇವೆಲ್ಲವನ್ನು ವಿಫಲಗೊಳಿಸಲಾಯಿತು ಎಂದು ವಿವರಿಸಿದರು.

ಈ ವರ್ಷ ಜಮ್ಮು ಮತ್ತು ಕಾಶ್ಮೀರದಲ್ಲಿ 100ಕ್ಕೂ ಹೆಚ್ಚು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳನ್ನು ನಡೆಸಲಾಗಿದ್ದು, ಕಾಶ್ಮೀರದಲ್ಲಿ 207 ಹಾಗೂ ಜಮ್ಮುವಿನಲ್ಲಿ 18 ಉಗ್ರರು ಸೇರಿದಂತೆ ಒಟ್ಟು 225 ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು