ಮುಂಬೈ: ಉದ್ಯಮಿ ಮುೇಶ್ ಅಂಬಾನಿ ಮತ್ತು ಅವರ ಕುಟುಂಬಕ್ಕೆ ಜೀವ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ಬಿಹಾರದಲ್ಲಿ ಬಂಧಿಸಲಾಗಿದೆ.

ಬುಧವಾರ ಮಧ್ಯರಾತ್ರಿ ಸುಮಾರಿಗೆ ಪೊಲೀಸರ ವಿಶೇಷ ತಂಡವು ದರ್ಬಾಂಗ್ ಜಿಲ್ಲೆಯಲ್ಲಿ ಆರೋಪಿಯನ್ನು ವಶಕ್ಕೆ ಪಡೆದಿದ್ದು, ಮುಂಬೈಗೆ ಕರೆತರಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬುಧವಾರ, ಮಧ್ಯಾಹ್ನ 12.57 ಮತ್ತು ಸಂಜೆ 5.04ರ ಸುಮಾರಿಗೆ ಎರಡು ಬಾರಿ ಅಂಬಾನಿ ಒಡೆತನದ ಎಚ್.ಎನ್. ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಗೆ ಬೆದರಿಕೆ ಕರೆ ಮಾಡಿದ್ದ ಅಪರಿಚಿತನೊಬ್ಬ, ಆಸ್ಪತ್ರೆ ಮತ್ತು ಅಂಬಾನಿ ನಿವಾಸ ಅಂಟಿಲ್ಲವನ್ನು ಸ್ಪೋಟಿಸುವ ಮೂಲಕ ಮುಕೇಶ್ ಅಂಬಾನಿ, ಪತ್ನಿ ನೀತಾ ಅಂಬಾನಿ ಮತ್ತು ಮಗ ಆಕಾಶ್ ಅಂಬಾನಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ.

ಜೀವ ಬೆದರಿಕೆ ಹಿನ್ನೆಲೆ ಆಸ್ಪತ್ರೆ ಮತ್ತು ಅಂಬಾನಿ ನಿವಾಸಕ್ಕೆ ಭದ್ರತೆ ಹೆಚ್ಚಿಸಿದ್ದ ಪೊಲೀಸರು. ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದರು.

ಉದ್ಯಮಿ ಮುಕೇಶ್, ನೀತಾ, ಆಕಾಶ್ ಅಂಬಾನಿಯನ್ನು ಕೊಲ್ಲುವುದಾಗಿ ಮತ್ತೆ ಬೆದರಿಕೆ ಕರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.