ಗುರುವಾರ , ಜುಲೈ 7, 2022
23 °C

ಗೋವಾ ವಿಧಾನಸಭೆಗೆ ಗಂಡ–ಹೆಂಡತಿ: ಮೂರು ಜೋಡಿ ಪ್ರವೇಶಕ್ಕೆ ವೇದಿಕೆ ಸಿದ್ಧ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಪಣಜಿ: ಗೋವಾದ ವಿಧಾನಸಭೆ ಪ್ರವೇಶಕ್ಕೆ ಮೂರು ದಂಪತಿ ಸಿದ್ಧರಾಗಿದ್ದಾರೆ. 40 ಸದಸ್ಯರ ಗೋವಾ ಹೊಸ ವಿಧಾನಸಭೆಯಲ್ಲಿ ಮೂರು ಜೋಡಿ ಗಂಡ ಮತ್ತು ಹೆಂಡತಿ ಇರಲಿದ್ದಾರೆ.

ಹೌದು, ಗುರುವಾರ ನಡೆದ ವಿಧಾನಸಭೆ ಚುನಾವಣೆಯ ಮತ ಎಣಿಕೆಯಲ್ಲಿ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಮತ್ತು ಅವರ ಪತ್ನಿ ದಿವ್ಯಾ ಕ್ರಮವಾಗಿ ವಲ್ಪೊಯ್ ಮತ್ತು ಪೊರಿಯಮ್ ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಗೆಲುವು ದಾಖಲಿಸಿದ್ಧಾರೆ. ವಿಶ್ವಜಿತ್ ರಾಣೆ 8,085 ಮತಗಳ ಅಂತರದಿಂದ ಗೆಲುವು ಕಂಡರೆ ಅವರ ಪತ್ನಿ ದಿವ್ಯಾ 13,943 ಮತಗಳ ಅಂತರದಿಂದ ವಿಜಯಶಾಲಿಯಾಗಿದ್ದಾರೆ.

ಕಾಂಗ್ರೆಸ್‌ನ ಮೈಕೆಲ್ ಲೋಬೊ ಅವರು ತಮ್ಮ ಸಾಂಪ್ರದಾಯಿಕ ವಿಧಾನಸಭಾ ಕ್ಷೇತ್ರವಾದ ಕಲಾಂಗುಟ್‌ನಿಂದ ಗೆದ್ದರೆ, ಪತ್ನಿ ದೆಲಿಲಾ ಅವರು ಸಿಯೋಲಿಮ್‌ನಿಂದ ಕಾಂಗ್ರೆಸ್ ಟಿಕೆಟ್‌ನಲ್ಲಿ ಗೆದ್ದಿದ್ದಾರೆ.

ಬಿಜೆಪಿಯ ಅಟಾನಾಸಿಯೊ ಮೊನ್ಸೆರಾಟ್ಟೆ ಪಣಜಿಯಿಂದ ಗೆದ್ದರೆ, ಅವರ ಪತ್ನಿ ಜೆನಿಫರ್ ಬಿಜೆಪಿ ಟಿಕೆಟ್‌ನಲ್ಲಿ ತಾಲೀಗಾವೊದಿಂದ ಗೆದ್ದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು