ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ಕಣ್ಣು, ಮೂಗಿನಲ್ಲಿ ನಾಲ್ಕು ಹೊರಳೆ ಇರುವ ಕರು ಜನನ: ಪೂಜೆಗೆ ಮುಂದಾದ ಜನ

Last Updated 17 ಜನವರಿ 2022, 8:08 IST
ಅಕ್ಷರ ಗಾತ್ರ

ರಾಯಪುರ್: ಜರ್ಸಿ ಹಸುವೊಂದು ಮೂರು ಕಣ್ಣುಗಳಿರುವ ಕರುವಿಗೆ ಜನ್ಮ ನೀಡಿರುವ ಘಟನೆ ಛತ್ತೀಸ್‌ಗಢದ ರಾಜ್‌ನಂದಗಾಂವ್ ಜಿಲ್ಲೆಯಲ್ಲಿ ನಡೆದಿದೆ.

ಈ ಅಪರೂಪದ ಕರುವನ್ನು ನೋಡಲು ಜನ ತಂಡೋಪತಂಡವಾಗಿ ಬರುತ್ತಿದ್ದು, ಕೆಲವರು ಇದು ಶಿವನ ಅವತಾರ, ಶಿವನ ಕೃಪೆ ಎಂದು ಪೂಜೆ ಸಲ್ಲಿಸುತ್ತಿದ್ದಾರೆ. ಈ ಕರುವಿಗೆ ಎರಡು ಕಣ್ಣುಗಳ ಜೊತೆ ಹಣೆಯ ಮಧ್ಯದಲ್ಲಿ ಮತ್ತೊಂದು ಕಣ್ಣು ಹಾಗೂ ಮೂಗಿನಲ್ಲಿ ನಾಲ್ಕು ಹೊರಳೆಗಳಿವೆ.

ರಾಜ್‌ನಂದಗಾಂವ್ ಜಿಲ್ಲೆಯ ಬುಂದೇಲಿ ವ್ಯಾಪ್ತಿಯ ಲೂಧಿ ನವಗಾಂವ್ ಎಂಬ ಹಳ್ಳಿಯ ಹೇಮಂತ್ ಚಾಂಡೆಲ್ ಎನ್ನುವ ರೈತನ ಮನೆಯಲ್ಲಿ ಈ ಕರು ಕಳೆದ ಮಕರ ಸಂಕ್ರಮಣದ ದಿನದಂದು ಜನನವಾಗಿದೆ. ಹಸು ಹಾಗೂ ಕರು ಆರೋಗ್ಯವಾಗಿವೆ ಎಂದು ಪಶುವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಎಎನ್‌ಐ ಸುದ್ದಿಸಂಸ್ಥೆ ಟ್ವೀಟಿಸಿದೆ. ಈ ಕರು ಸುತ್ತಮುತ್ತಲಿನ ಜನರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದು ಕೆಲವು ಜನ ಹಣ್ಣು–ಕಾಯಿ ತೆಗೆದುಕೊಂಡು ಬಂದು ಪೂಜೆ ಸಲ್ಲಿಸುತ್ತಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ಪಶುವೈದ್ಯಾಧಿಕಾರಿಗಳು, ಅಪರೂಪಕ್ಕೆ ಒಮ್ಮೆ ಈ ರೀತಿಯ ಕರುಗಳು ಜನನವಾಗುತ್ತವೆ. ಜನ ಮೂಢನಂಬಿಕೆ ಇಟ್ಟುಕೊಳ್ಳಬಾರದು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT