ಮಂಗಳವಾರ, ಮಾರ್ಚ್ 2, 2021
23 °C

ಗಣರಾಜ್ಯೋತ್ಸವ: ದೆಹಲಿಯಲ್ಲಿ ರೈತರ ಟ್ರ್ಯಾಕ್ಟರ್‌ ರ್‍ಯಾಲಿ, ಬಿಗಿ ಬಂದೋಬಸ್ತ್‌

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಗಣರಾಜ್ಯೋತ್ಸವ ಸಮಾರಂಭ ಮತ್ತು ರೈತರಿಂದ ಟ್ರ್ಯಾಕ್ಟರ್‌ ರ್‍ಯಾಲಿ ನಡೆಯಲಿದ್ದು, ನಗರದ ಹಲವೆಡೆ ಬಿಗಿ ಪೊಲೀಸ್ ಬಂದೋಬಸ್ತ್‌ ಮಾಡಲಾಗಿದೆ.

ಗಣರಾಜ್ಯೋತ್ಸವ ಪಥಸಂಚಲನ ನಡೆಯಲಿರುವ ರಾಜಪಥ ಕಾರ್ಯಕ್ರಮ ವೀಕ್ಷಿಸಲು 25 ಸಾವಿರ ಮಂದಿ ಭಾಗವಹಿಸಲಿದ್ದಾರೆ. ಸಮಾರಂಭದ ಭದ್ರತೆಗಾಗಿ ಸುಮಾರು ಆರು ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ನಗರದ ಪ್ರಮುಖ ಸ್ಥಳಗಳಲ್ಲಿ ಮುಖ ಗುರುತಿಸುವ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ರಾಜಪಥದಲ್ಲಿ ತಪಾಸಣೆಗೆ ನಿಯೋಜಿಸಲಾದ ಸಿಬ್ಬಂದಿಯು ಕೋವಿಡ್‌ ತಡೆ ಮಾರ್ಗಸೂಚಿ ಪ್ರಕಾರ, ಪಿಪಿಇ ಕಿಟ್‌, ಮಾಸ್ಕ್‌ ಮತ್ತು ಮುಖಕವಚ ಧರಿಸಲಿದ್ದಾರೆ.

ಎತ್ತರದ ಕಟ್ಟಡಗಳ ಮೇಲೆ ನಿಪುಣ ಶೂಟರ್‌ಗಳನ್ನು ನಿಯೋಜಿಸಲಾಗಿದ್ದು, ಅವರು ಪಥಸಂಚಲನ ನಡೆಯುವ ರಾಜಪಥದ ಎಂಟು ಕಿ.ಮೀ. ಮಾರ್ಗದ ಮೇಲೆ ಹದ್ದಿನ ಕಣ್ಣು ಇರಿಸಲಿದ್ದಾರೆ. ರಾಜಧಾನಿಯಲ್ಲಿ ಐದು ಸುತ್ತಿನ ಭದ್ರತೆಯ ವ್ಯವಸ್ಥೆ ಮಾಡಲಾಗಿದೆ.

ಪಥಸಂಚಲನ ಮುಗಿದ ಬಳಿಕ ರೈತರು ಟ್ರ್ಯಾಕ್ಟರ್‌ ಜಾಥಾ ನಡೆಸಲಿದ್ದಾರೆ. ರ್‍ಯಾಲಿಯಲ್ಲಿ 5 ಸಾವಿರ ಟ್ರ್ಯಾಕ್ಟರ್‌ಗಳು ಭಾಗವಹಿಸಲಿವೆ. ಹರಿಯಾಣ, ಪಂಜಾಬ್‌, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಿಂದ ರೈತರು ಈಗಾಗಲೇ ದೆಹಲಿಗೆ ಬಂದಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ರೈತರ ರ್‍ಯಾಲಿಗೆ ಪೋಲಿಸರು ಹಲವು ಷರತ್ತುಗಳನ್ನು ವಿಧಿಸಿದ್ದಾರೆ.

ಇದನ್ನೂ ಓದಿ... ಗೂಗಲ್‌ನ ಗಣರಾಜ್ಯೋತ್ಸವದ ಡೂಡಲ್‌ನಲ್ಲಿ ಭಾರತದ ವರ್ಣರಂಜಿತ ಪರಂಪರೆ 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು