ಸೋಮವಾರ, ಸೆಪ್ಟೆಂಬರ್ 26, 2022
22 °C

ಸೀರೆಯುಟ್ಟೇ ಫುಟ್‌ಬಾಲ್‌ ಆಡಿದ ಸಂಸದೆ ಮಹುವಾ ಮೊಯಿತ್ರಾ: ಚಿತ್ರ ವೈರಲ್‌ 

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ‘ಎಂಪಿ ಕಪ್ ಟೂರ್ನಮೆಂಟ್ 2022’ ರಲ್ಲಿ ಸೋಮವಾರ ಭಾಗವಹಿಸಿದ್ದ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಸೀರೆಯುಟ್ಟೇ ಫುಟ್‌ಬಾಲ್ ಆಡಿದ್ದಾರೆ.  ಚಿತ್ರಗಳು ವೈರಲ್‌ ಆಗಿವೆ. 

ಸ್ಫೋರ್ಟ್ಸ್‌ ಶೂಗಳನ್ನು ಹಾಕಿಕೊಂಡು, ತಮ್ಮ ಎಂದಿನ ಕರಿ ಕನ್ನಡಕ ಧರಿಸಿ ಫುಟ್‌ ಬಾಲ್‌ ಅನ್ನು ಕಿಕ್‌ ಮಾಡುತ್ತಿರುವ ಫೋಟೊಗಳು ಸಾಮಾಜಿಕ ಮಾಧ್ಯಮದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. 

ಚಿತ್ರಗಳನ್ನು ಮಹುವಾ ಅವರು ತಮ್ಮ ಟ್ವಿಟರ್ ಖಾತೆಯಲ್ಲೂ ಹಂಚಿಕೊಂಡಿದ್ದಾರೆ. ‘ಕೃಷ್ಣನಗರ ‘ಎಂಪಿ ಕಪ್ ಟೂರ್ನಮೆಂಟ್ 2022’ರ ಫೈನಲ್‌ನ ಮೋಜಿನ ಕ್ಷಣಗಳಿವು. ಹೌದು, ನಾನು ಸೀರೆಯಲ್ಲೇ ಆಡುತ್ತೇನೆ’ ಎಂದು ಅವರು ಬರೆದುಕೊಂಡಿದ್ದಾರೆ.

ಇವುಗಳನ್ನೂ ಓದಿ...

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು