ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡು ಕಾಂಗ್ರೆಸ್ ಸಂಸದ ವಸಂತಕುಮಾರ್ ಕೋವಿಡ್-19ರಿಂದ ನಿಧನ

Last Updated 28 ಆಗಸ್ಟ್ 2020, 16:04 IST
ಅಕ್ಷರ ಗಾತ್ರ

ಚೆನ್ನೈ: ಕನ್ಯಾಕುಮಾರಿ ಲೋಕಸಭಾ ಕ್ಷೇತ್ರದ ಸದಸ್ಯ ಮತ್ತು ತಮಿಳುನಾಡು ಕಾಂಗ್ರೆಸ್ ಘಟಕದ ಕಾರ್ಯಾಧ್ಯಕ್ಷ ಎಚ್.ವಸಂತಕುಮಾರ್ (70) ಶುಕ್ರವಾರ ನಿಧನರಾದರು. ಅವರು ಕೋವಿಡ್-19ರಿಂದ ಬಳಲುತ್ತಿದ್ದರು. 'ವಸಂತ್ ಅಂಡ್ ಕೊ' ಬಹು ಬ್ರಾಂಡ್ ಎಲೆಕ್ಟ್ರಾನಿಕ್ ಮಳಿಗೆಗಳಮಾಲೀಕರೂ ಆಗಿದ್ದ ಅವರು ತಮಿಳುನಾಡಿನಲ್ಲಿ ಮನೆಮಾತಾಗಿದ್ದರು.

ಆಗಸ್ಟ್‌ 10ರಿಂದ ಕೊರೊನಾವೈರಸ್‌ ಸೋಂಕಿಗಾಗಿ ಚಿಕಿತ್ಸೆ ಪಡೆಯುತ್ತಿದ್ದಅಪೊಲೊ ಆಸ್ಪತ್ರೆಯಲ್ಲಿ ಸಂಜೆ 6.56ಕ್ಕೆ ಕೊನೆಯುಸಿರೆಳೆದರು.ತಮಿಳುನಾಡಿನಲ್ಲಿ ಕೊರೊನಾದಿಂದ ಮೃತಪಟ್ಟ 2ನೇ ರಾಜಕಾರಣಿ ವಸಂತಕುಮಾರ್. ಕಳೆದ ಜೂನ್ ತಿಂಗಳಲ್ಲಿ ಡಿಎಂಕೆ ಶಾಸಕ ಜೆ.ಅನ್ಬಳಗನ್ ಕೊರೊನಾದಿಂದ ನಿಧನರಾಗಿದ್ದರು.

ವಸಂತಕುಮಾರ್ ಅವರು ಮೊದಲ ಬಾರಿಗೆ ತಮಿಳುನಾಡು ವಿಧಾನಸಭೆಗೆ 2006ರಂದು ತಿರುನಲ್ವೇಲಿ ಜಿಲ್ಲೆನಂಗುನೇರಿ ಕ್ಷೇತ್ರದಿಂದ ಮೊದಲ ಬಾರಿಗೆ ಆಯ್ಕೆಯಾಗಿದ್ದರು. 2016ರಲ್ಲಿಯೂ ಇದೇ ಕ್ಷೇತ್ರದಿಂದ ಜಯಗಳಿಸಿದ್ದರು. 2019ರಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಅವರುಕೇಂದ್ರ ಸಚಿವ ಪೊನ್ ರಾಧಾಕೃಷ್ಣನ್ ಅವರನ್ನು 2 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದರು.

ಮೋದಿ, ರಾಹುಲ್ ಸಂತಾಪ

ಸಂಸದ ಎಚ್.ವಸಂತಕುಮಾರ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿ ಸಂತಾಪ ತೀಳಿಸಿದ್ದಾರೆ.

'ವಸಂತಕುಮಾರ್ ನಿಧನದಿಂದ ನನಗೆ ದುಃಖವಾಗಿದೆ. ವ್ಯಾಪಾರ ಮತ್ತು ಸಮಾಜ ಸೇವೆಯಲ್ಲಿ ಅವರ ಪರಿಶ್ರಮ ಉಲ್ಲೇಖಾರ್ಹ. ತಮಿಳುನಾಡಿನ ಪ್ರಗತಿಯ ಬಗ್ಗೆ ಅವರಿಗಿದ್ದ ಕಾಳಜಿಯುಅವರೊಂದಿಗೆ ಮಾತನಾಡುವಾಗ ನನ್ನ ಅರಿವಿಗೂ ಬರುತ್ತಿತ್ತು' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

'ಕೋವಿಡ್-19ರಿಂದಕನ್ಯಾಕುಮಾರಿ ಕ್ಷೇತ್ರದ ಸಂಸದ ಎಚ್.ವಸಂತಕುಮಾರ್ ಅವರ ಅಕಾಲಿಕವಾಗಿ ನಿಧನರಾದ ಸುದ್ದಿಯಿಂದ ನನಗೆ ಆಘಾತವಾಗಿದೆ. ಜನರಿಗೆ ಸೇವೆ ಮಾಡಬೇಕು ಎಂಬ ಕಾಂಗ್ರೆಸ್ ತತ್ವದಲ್ಲಿ ಅವರಿಗಿದ್ದ ಬದ್ಧತೆಯು ನಮ್ಮ ಹೃದಯಗಳಲ್ಲಿ ಸದಾ ಇರುತ್ತದೆ. ಅವರ ಗೆಳೆಯರು ಮತ್ತು ಕುಟುಂಬದ ಸದಸ್ಯರಿಗೆ ನನ್ನ ಹೃದಯ ತುಂಬಿದ ಸಂತಾಪಗಳು' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT