ಭಾನುವಾರ, ಏಪ್ರಿಲ್ 18, 2021
30 °C

ಟೂಲ್‌ ಕಿಟ್‌ ಪ್ರಕರಣ: ಮಾ.15ರವರೆಗೆ ನಿಖಿತಾ, ಶಾಂತನು ಬಂಧಿಸದಂತೆ ಆದೇಶ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಟೂಲ್‌ ಕಿಟ್‌ ಪ್ರಕರಣದಲ್ಲಿ ಆರೋಪಿಗಳಾಗಿರುವ ನಿಖಿತಾ ಜಾಕೋಬ್ ಮತ್ತು ಶಾಂತನು ಮುಲುಕ್‌ ಅವರನ್ನು ಮಾರ್ಚ್ 15ರವರೆಗೂ ಬಂಧಿಸದಂತೆ ಅವಧಿಯನ್ನು ವಿಸ್ತರಿಸಿ ಸ್ಥಳೀಯ ನ್ಯಾಯಾಲಯ ಆದೇಶಿಸಿದೆ.

ರೈತರ ಪ್ರತಿಭಟನೆಗೆ ಕುರಿತ ಸಾಮಾಜಿಕ ಜಾಲತಾಣದ ಟೂಲ್‌ಕಿಟ್‌ ಸಂಬಂಧಿಸಿ ಪರಿಸರ ಕಾರ್ಯಕರ್ತೆ ದಿಶಾ ರವಿ ಹಾಗೂ ಈ ಇಬ್ಬರು ಆರೋಪಿಗಳಾಗಿದ್ದರು. ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶರಾದ ಧರ್ಮೇಂದರ್ ರಾಣಾ ಅವಧಿ ವಿಸ್ತರಿಸಿ ಆದೇಶ ಹೊರಡಿಸಿದ್ದು, ವಿಚಾರಣೆಯನ್ನು 15ಕ್ಕೆ ಮುಂದೂಡಿದರು.

ದೆಹಲಿಯ ಪೊಲೀಸರು ದಾಖಲಿಸಿರುವ ಪ್ರಕರಣ ಸಂಬಂಧ ಪ್ರತಿಕ್ರಿಯೆಯನ್ನು ದಾಖಲಿಸಲು ಸಮಯ ಬೇಕಾಗಿದೆ ಎಂದು ಈ ಇಬ್ಬರ ಪರ ಹಾಜರಿದ್ದ ವಕೀಲರ ಮನವಿಯನ್ನು ನ್ಯಾಯಾಧೀಶರು ಪುರಸ್ಕರಿಸಿದರು. ಈ ಇಬ್ಬರ ವಿರುದ್ಧವು ದೇಶದ್ರೋಹ ಮತ್ತು ಇತರೆ ಆರೋಪಗಳಡಿ ಪ್ರಕರಣ ದಾಖಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು