ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರದಲ್ಲಿ 5 ಲಕ್ಷ ಲಸಿಕೆ ವ್ಯರ್ಥ ಎಂಬ ವಾದ ನಿರಾಕರಿಸಿದ ಆರೋಗ್ಯ ಸಚಿವ

Last Updated 9 ಏಪ್ರಿಲ್ 2021, 6:52 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರದಲ್ಲಿ ಐದು ಲಕ್ಷಕ್ಕೂ ಹೆಚ್ಚು ಕೊರೊನಾ ಲಸಿಕೆ ವ್ಯರ್ಥವಾಗಿದೆ ಎಂಬ ಕೇಂದ್ರದ ವಾದವನ್ನು ರಾಜ್ಯ ಆರೋಗ್ಯ ಸಚಿವ ರಾಜೇಶ್ ಟೋಪೆ ಅಲ್ಲಗಳೆದಿದ್ದಾರೆ.

‘ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು ನೀಡಿದ ಅಂಕಿ– ಅಂಶಗಳು ಸಮರ್ಪಕವಾಗಿಲ್ಲ’ ಎಂದು ರಾಜೇಶ್ ಹೇಳಿದ್ದಾರೆ.

‘ಕೇಂದ್ರ ಸಚಿವರು ದೇಶದಾದ್ಯಂತ ವ್ಯರ್ಥವಾಗಿರುವ ಲಸಿಕೆಯ ಶೇಕಡಾವಾರು ಪ್ರಮಾಣವನ್ನು ಉಲ್ಲೇಖಿಸಿದ್ದಾರೆ. ಆದರೆ, ರಾಜ್ಯದಲ್ಲಿ ವ್ಯರ್ಥವಾಗಿರುವ ಲಸಿಕೆಯ ಪ್ರಮಾಣ, ಅದಕ್ಕಿಂತ ಅರ್ಧದಷ್ಟು ಕಡಿಮೆ ಇದೆ‘ ಎಂದು ಟೋಪೆ ಟ್ವೀಟ್‌ ಮಾಡಿದ್ದಾರೆ.

ಲಸಿಕೆ ವಿಚಾರದಲ್ಲಿ ಮಹಾರಾಷ್ಟ್ರ ಸರ್ಕಾರ ರಾಜಕೀಯ ಮಾಡಬಾರದು ಎಂದು ಗುರುವಾರ ಜಾವಡೇಕರ್ ಹೇಳಿಕೆ ನೀಡಿದ್ದರು. ‘ಮಹಾರಾಷ್ಟ್ರ ರಾಜ್ಯಕ್ಕೆ ಇಲ್ಲಿವರೆಗೆ ಲಸಿಕೆಯ 1,06,19,190 ಡೋಸೇಜ್‌ಗಳನ್ನು ಪೂರೈಸಲಾಗಿದೆ. 90,53,523 ಲಸಿಕೆಯ ಡೋಸೇಜ್‌ ಬಳಕೆಯಾಗಿದೆ. 7,43,280 ಡೋಸೇಜ್‌ಗಳಷ್ಟು ಲಸಿಕೆ ಕೊಡುವುದು ಬಾಕಿ ಇದೆ. 23 ಲಕ್ಷ ಡೋಸೇಜ್‌ಗಳಷ್ಟು ಲಸಿಕೆ ಲಭ್ಯವಿದೆ‘ ಎಂದು ಜಾವಡೇಕರ್ ಟ್ವೀಟ್‌ ಮಾಡಿದ್ದರು.

ಮಹಾರಾಷ್ಟ್ರದಲ್ಲಿ ದಿನೇ ದಿನೇ ಕೋವಿಡ್‌ 19 ಪ್ರಕರಣಗಳು ಹೆಚ್ಚಾಗುತ್ತಿದ್ದು, ರಾಜ್ಯ ಸರ್ಕಾರ ಕೇಂದ್ರದಿಂದ ಹೆಚ್ಚಿನ ಲಸಿಕೆಗೆ ಬೇಡಿಕೆ ಇಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT