ಸೋಮವಾರ, ಮಾರ್ಚ್ 1, 2021
17 °C

ಪಂಜಾಬ್‌ನ ಪ್ರತೀ ಹಳ್ಳಿಯಿಂದ ಒಂದು ಟ್ರ್ಯಾಕ್ಟರ್: ಹೊಸ ಇತಿಹಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ದೆಹಲಿಯ ರೈತ ಹೋರಾಟದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿರುವ ಪಂಜಾಬ್ ರೈತರು ಪ್ರತಿ ಹಳ್ಳಿಯಿಂದಲೂ ಟ್ರ್ಯಾಕ್ಟರ್ ಮೂಲಕ ದೆಹಲಿಗೆ ಆಗಮಿಸುತ್ತಿದ್ದಾರೆ.

ಪಂಜಾಬ್‌ನ ನೌಶೇರಾ ಧಲ್ಲಾ ಗೂಗಲ್ ನಕ್ಷೆಗಳಲ್ಲಿ ಟ್ರ್ಯಾಕ್ಟರ್ ಚುಕ್ಕೆಗಳು ಗೋಚರಿಸುತ್ತಿವೆ. ಭಾರತ ಮತ್ತು ಪಾಕಿಸ್ತಾನದ 3,000 ಕಿ.ಮೀ ಗಡಿಯಲ್ಲಿ ಸಾವಿರಾರು ಹಳ್ಳಿಗಳಲ್ಲಿ ಈ ದೃಶ್ಯ ಕಂಡುಬಂದಿದೆ.

ವಿವಿಧ ಹಳ್ಳಿಗಳಿಂದ ಬಂದ ಟ್ರ್ಯಾಕ್ಟರ್‌ಗಳು ವೆಸ್ಟರ್ನ್ ಪೆರಿಫೆರಲ್ ಎಕ್ಸ್‌ಪ್ರೆಸ್‌ವೇಗೆ  ಒಟ್ಟಾಗಿ ಸೇರುತ್ತಿರುವ  ಟ್ರಾಕ್ಟರ್‌ಗಳು ಚುಕ್ಕಿಯಂತೆ ಕಾಣುತ್ತಿವೆ. ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಕುಂಡ್ಲಿ ಮತ್ತು ಮುರ್ತಾಲ್ ನಡುವಿನ ವಿಶಾಲವಾದ ಪ್ರದೇಶದಲ್ಲಿ ಟ್ರಾಕ್ಟರುಗಳ ಚುಕ್ಕೆ.ಗಳು ಕಾಣುತ್ತಿವೆ.

ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ಪ್ರಮಾಣದ ಟ್ರ್ಯಾಕ್ಟರ್‌ಗಳು ಒಟ್ಟೊಟ್ಟಿಗೆ ಸೇರುತ್ತಿದ್ದು, ಐತಿಹಾಸಿಕ ಘಟನೆಯಾಗಲಿದೆ.

“ಇಲ್ಲಿ ಪ್ರತಿ ಪಂಜಾಬ್ ರಾಜ್ಯದ ಪ್ರತಿ ಗ್ರಾಮದಿಂದ ಕನಿಷ್ಠ ಒಂದು ಟ್ರ್ಯಾಕ್ಟರ್ ಇದೆ ಎಂದು ನಿಮಗೆ ತಿಳಿದಿದೆಯೇ? ಅದು ಒಗ್ಗಟ್ಟಿನ ಸೌಂದರ್ಯ. ಲಕ್ಷಾಂತರ ಚುಕ್ಕೆಗಳು ಈ ಕ್ಯಾನ್ವಾಸ್ ಅನ್ನು ರೂಪಿಸುತ್ತವೆ. ” ಎಂದು ರೈತ ಹೋರಾಟಗಾರಹರ್ಜಿತ್ ಸಿಂಗ್ ಹೇಳುತ್ತಾರೆ.

ಇನ್ನೂ ಕೆಲವೇ ಗಂಟೆಗಳಲ್ಲಿ ದೆಹಲಿ ತಲುಪಲಿರುವ ಈ ಲಕ್ಷಾಂತರ ಟ್ರ್ಯಾಕ್ಟರ್‌ಗಳು ಕೃಷಿ ಕಾಯ್ದೆ ವಿರೋಧಿ ಹೋರಾಟದಲ್ಲಿ ಭಾಗವಹಿಸಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು