ಸೋಮವಾರ, ನವೆಂಬರ್ 23, 2020
22 °C

ಅರುಣಾಚಲ: ‘ರಾಷ್ಟ್ರೀಯತೆ’ ಮೂಡಿಸಲು ವಿದ್ಯಾರ್ಥಿಗಳಿಗೆ ತ್ರಿವರ್ಣ ಮಾಸ್ಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani
ಗುವಾಹಟಿ: ಅರುಣಾಚಲ ಪ್ರದೇಶದಲ್ಲಿ ನ. 16ರಿಂದ ಶಾಲೆಗಳು ಪುನರಾರಂಭವಾಗುತ್ತಿದ್ದು, ಕೋವಿಡ್‌–19ನಿಂದ ರಕ್ಷಣೆ ಪಡೆಯಲು ಹಾಗೂ ರಾಷ್ಟ್ರೀಯತೆ ಬಗ್ಗೆ ಅರಿವು ಮೂಡಿಸಲು ವಿದ್ಯಾರ್ಥಿಗಳಿಗೆ ತ್ರಿವರ್ಣದ ಮಾಸ್ಕ್ ವಿತರಿಸಲು ಅಲ್ಲಿನ ಸರ್ಕಾರ ಮುಂದಾಗಿದೆ.
 
ಅರುಣಾಚಲ ಪ್ರದೇಶ ಸರ್ಕಾರವು ಶಾಲಾ ಮಕ್ಕಳಿಗಾಗಿ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯಿಂದ 60 ಸಾವಿರ ತ್ರಿವರ್ಣದ ಮಾಸ್ಕ್‌ಗಳನ್ನು ಖರೀದಿಸಿದೆ. ಈ ಮಾಸ್ಕ್‌ಗಳು ಗಡಿಪ್ರದೇಶದ ಶಾಲಾ ಮಕ್ಕಳಲ್ಲಿ ರಾಷ್ಟ್ರೀಯತೆಯ ಬಗ್ಗೆ ಅರಿವು ಮೂಡಿಸಲಿದೆ ಎನ್ನುವುದು ಸರ್ಕಾರದ ಇಂಗಿತ.
 
ಹತ್ತರಿಂದ ಹನ್ನೆರಡನೇ ತರಗತಿಯನ್ನು ಪುನರಾರಂಭಿಸಲು ಸರ್ಕಾರ ನಿರ್ಧರಿಸಿದ್ದು, ನವೆಂಬರ್ 3ರಂದು ಮಾಸ್ಕ್‌ಗಳನ್ನು ಪೂರೈಸುವ ಕುರಿತು ಆದೇಶ ಹೊರಡಿಸಿದೆ. ಇನ್ನು 6 ದಿನಗಳಲ್ಲಿ ವಾಯುಮಾರ್ಗದ ಮೂಲಕ ಮಾಸ್ಕ್‌ಗಳನ್ನು ತಲುಪಿಸಲಾಗುವುದು ಎಂದು ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಹೇಳಿದೆ.
 
ಅರುಣಾಚಲ ಪ್ರದೇಶವು ತನ್ನ ದಕ್ಷಿಣ ಟಿಬೆಟ್‌ನ ಭಾಗವಾಗಿದೆ ಎಂದು ಚೀನಾ ಆಗಾಗ್ಗೆ ಹೇಳುತ್ತಿರುವುದನ್ನು ಗಮದನಲ್ಲಿಟ್ಟುಕೊಂಡು, ಅರುಣಾಚಲ ಪ್ರದೇಶದ ಬಿಜೆಪಿ ಸರ್ಕಾರವು, ವಿದ್ಯಾರ್ಥಿಗಳಿಗೆ ತ್ರಿವರ್ಣ ಮಾಸ್ಕ್ ವಿತರಿಸಲು ಮುಂದಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು