ಬುಧವಾರ, ಅಕ್ಟೋಬರ್ 21, 2020
21 °C

ತೆಲಂಗಾಣ: ಗುಂಡಿನ ಚಕಮಕಿ, ಇಬ್ಬರು ಮಾವೋವಾದಿಗಳ ಹತ್ಯೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಹೈದರಾಬಾದ್: ತೆಲಂಗಾಣದ ಕುಮಾರಂ ಭೀಮ್ ಜಿಲ್ಲೆಯ ಕದಂಬ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಮಾವೋವಾದಿಗಳು ಹತ್ಯೆಯಾಗಿದ್ದಾರೆ.

ಖಚಿತ ಮಾಹಿತಿ ಆಧರಿಸಿ ಈ ಭಾಗದಲ್ಲಿ ಪೊಲೀಸರು, ವಿಶೇಷ ಪಡೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು. ಮಾವೋವಾದಿಗಳ ಗುಂಪು ಪೊಲೀಸರ ಮೇಲೇ ಗುಂಡು ಹಾರಿಸಿದ್ದು, ಪ್ರತಿಯಾಗಿ ಪೊಲೀಸರೂ ಗುಂಡು ಹಾರಿಸಿದರು.

ಇಬ್ಬರು ಸತ್ತಿದ್ದು, ಉಳಿದವರು ಪರಾರಿಯಾಗಿದ್ದಾರೆ. ಸ್ಥಳವನ್ನು ತಪಾಸಣೆ ವೇಳೆ ಇಬ್ಬರ ಶವಗಳು ಪತ್ತೆಯಾದವರು. ಇವರ ಪೈಕಿ ಒಬ್ಬನನ್ನು ಗುರುತಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿ.ಸತ್ಯನಾರಾಯಣ ತಿಳಿಸಿದರು.  

ಇನ್ನೊಬ್ಬನನ್ನು ಗುರುತಿಸುವ ಕಾರ್ಯ ನಡೆದಿದೆ. ಈ ತಿಂಗಳ ಆರಂಭದಲ್ಲಿಯೂ ಗುಂಡಿನ ಚಕಮಕಿ ನಡೆದಿದ್ದು, ಆಗ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಮಾವೋವಾದಿಗಳು ಮೃತಪಟ್ಟಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು