ಮಂಗಳವಾರ, ಸೆಪ್ಟೆಂಬರ್ 21, 2021
26 °C

ಮೂರನೇ ಎರಡರಷ್ಟು ಭಾರತೀಯರಲ್ಲಿ ಕೋವಿಡ್ ಪ್ರತಿಕಾಯ: ಕೇಂದ್ರ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಆರು ವರ್ಷ ಮೇಲ್ಪಟ್ಟ ದೇಶದ ಮೂರನೇ ಎರಡರಷ್ಟು ಮಂದಿ ಕೋವಿಡ್‌–19 ವಿರುದ್ಧ ಪ್ರತಿಕಾಯಗಳನ್ನು ಹೊಂದಿದ್ದಾರೆ ಎಂಬುದು ರಾಷ್ಟ್ರಮಟ್ಟದ ಸಮೀಕ್ಷೆಯಿಂದ ತಿಳಿದುಬಂದಿದೆ. ಸುಮಾರು 40 ಕೋಟಿ ಮಂದಿ ಕೋವಿಡ್‌ ವಿರುದ್ಧ ಪ್ರತಿಕಾಯಗಳನ್ನು ಹೊಂದಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಸಮೀಕ್ಷಾ ವರದಿಯು ಆಶಾದಾಯಕವಾಗಿದೆ. ಆದರೆ, ಕೋವಿಡ್ ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ಇಷ್ಟಕ್ಕೇ ತೃಪ್ತಿಪಟ್ಟುಕೊಳ್ಳಲಾಗದು. ಕೋವಿಡ್ ಮಾರ್ಗಸೂಚಿಯನ್ನು ಎಲ್ಲರೂ ಅನುಸರಿಸಬೇಕು ಎಂದೂ ಸರ್ಕಾರ ಹೇಳಿದೆ.

ಓದಿ: 

ಜೂನ್ ಮತ್ತು ಜುಲೈ ತಿಂಗಳಲ್ಲಿ ಐಸಿಎಂಆರ್ ಸಮೀಕ್ಷೆ ನಡೆಸಿತ್ತು.

‘ದೇಶದಲ್ಲಿ ಆರು ವರ್ಷ ಮೇಲ್ಪಟ್ಟ ಶೇ 67.6ರಷ್ಟು ಮಂದಿ ಕೋವಿಡ್ ವಿರುದ್ಧ ಪ್ರತಿಕಾಯ ಹೊಂದಿರುವುದು ಸಮೀಕ್ಷೆಯಿಂದ ತಿಳಿದು ಬಂದಿದೆ. ಮೂರನೇ ಒಂದು ಭಾಗ ಜನರು, ಅಂದರೆ ಸುಮಾರು 40 ಕೋಟಿ ಜನ ಕೋವಿಡ್ ವಿರುದ್ಧ ಪ್ರತಿಕಾಯ ಹೊಂದಿಲ್ಲ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಮೀಕ್ಷೆಗೆ ಒಳಪಟ್ಟ ಶೇ 85ರಷ್ಟು ಆರೋಗ್ಯ ಕಾರ್ಯಕರ್ತರಲ್ಲಿ ಪ್ರತಿಕಾಯಗಳಿರುವುದು ಕಂಡುಬಂದಿದೆ. ಹತ್ತನೇ ಒಂದರಷ್ಟು ಆರೋಗ್ಯ ಕಾರ್ಯಕರ್ತರು ಇನ್ನೂ ಲಸಿಕೆ ಪಡೆದಿಲ್ಲ ಎಂದೂ ಅವರು ಹೇಳಿದ್ದಾರೆ.

ಓದಿ: 

ಸಮೀಕ್ಷೆಯಲ್ಲಿ 28,975 ಮಂದಿ ಮತ್ತು 7,252 ಆರೋಗ್ಯ ಕಾರ್ಯಕರ್ತರು ಭಾಗಿಯಾಗಿದ್ದರು. ನಾಲ್ಕನೇ ಸುತ್ತಿನ ಈ ಸಮೀಕ್ಷೆಯಲ್ಲಿ 21 ರಾಜ್ಯಗಳ 70 ಜಿಲ್ಲೆಗಳ ಜನರ ಮಾಹಿತಿ ಕಲೆಹಾಕಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು