ಮಂಗಳವಾರ, ನವೆಂಬರ್ 29, 2022
21 °C

ದೇಶವನ್ನು ಆರ್ಥಿಕ ಬೆಳವಣಿಗೆಯತ್ತ ಕೊಂಡೊಯ್ಯಲು ತೆರಿಗೆ ಕಡಿತ ಅನಿವಾರ್ಯ: ಲಿಜ್‌

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಬರ್ಮಿಂಗ್‌ಹ್ಯಾಮ್‌ (ಎಎಫ್‌ಪಿ): ‘ನಾವು ತೆರಿಗೆ ಕಡಿತದ ಕುರಿತು ಕೈಗೊಂಡಿರುವ ನಿರ್ಣಯವನ್ನು ಕೆಲವರು ಟೀಕಿಸಿದ್ದಾರೆ. ಇದು ಸರ್ಕಾರದ ತಪ್ಪು ಹೆಜ್ಜೆ ಎಂದೂ ಹೇಳಿದ್ದಾರೆ. ಅದನ್ನು ನಾನೂ ಒಪ್ಪುತ್ತೇನೆ. ಆದರೆ ದೇಶವನ್ನು ಮತ್ತೆ ಆರ್ಥಿಕ ಬೆಳವಣಿಗೆಯತ್ತ ಕೊಂಡೊಯ್ಯಲು ಇಂತಹ ನಿರ್ಣಯಗಳು ಅನಿವಾರ್ಯ’ ಎಂದು ಬ್ರಿಟನ್‌ ಪ್ರಧಾನಿ ಲಿಜ್‌ ಟ್ರಸ್‌ ಭಾನುವಾರ ಹೇಳಿದ್ದಾರೆ.

‘ಇಂಧನ ಬಿಕ್ಕಟ್ಟು ಮತ್ತು ಹಣದುಬ್ಬರ ನಿಭಾಯಿಸಲು ನಾವು ಸ್ಪಷ್ಟ ಯೋಜನೆ ಹೊಂದಿದ್ದೇವೆ. ದೇಶದ ಆರ್ಥಿಕ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಯೋಜನೆ ರೂಪಿಸಿದ್ದೇವೆ’ ಎಂದು ಬಿಬಿಸಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು