ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶ| ಉಮೇಶ್ ಪಾಲ್‌ ಕೊಲೆ: ಬುಲ್ಡೋಜರ್ ಬಳಸಿ ಆರೋಪಿ ಸಹಚರನ ಮನೆ ಧ್ವಂಸ

Last Updated 2 ಮಾರ್ಚ್ 2023, 14:24 IST
ಅಕ್ಷರ ಗಾತ್ರ

ಪ್ರಯಾಗ್‌ರಾಜ್‌, ಉತ್ತರ ಪ್ರದೇಶ: ಉಮೇಶ್‌ ಪಾಲ್‌ ಕೊಲೆ ಪ್ರಕರಣದ ಆರೋಪಿಯೂ ಆಗಿರುವ ಪಾತಕಿ ಅತೀಕ್‌ ಅಹ್ಮದ್‌ನ ಸಹಚರನ ಮನೆಯನ್ನು ಗುರುವಾರ ಬಿಗಿ ಪೊಲೀಸ್‌ ಬಂದೋಬಸ್ತ್‌ನಲ್ಲಿ ಬುಲ್ಡೋಜರ್‌ ಬಳಸಿ ನೆಲಸಮಗೊಳಿಸಲಾಗಿದೆ.

ಶಸ್ತ್ರಾಸ್ತ್ರ ವ್ಯಾಪಾರಿ ಸಫ್ದರ್ ಅಲಿ ಒಡೆತನದ ಎರಡು ಅಂತಸ್ತಿನ ಕಟ್ಟಡವನ್ನು ಮೂರು ಬುಲ್ಡೋಜರ್‌ಗಳನ್ನು ಬಳಸಿ ನೆಲಸಮ ಮಾಡಲಾಗಿದೆ.

ಧೂಮನ್‌ಗಂಜ್‌ ಪೊಲೀಸ್ ಠಾಣೆ ಪ್ರದೇಶದಲ್ಲಿ ನೆಲಸಮ ಮಾಡಿದ ಕಟ್ಟಡವನ್ನು ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಪ್ರಯಾಗ್ರಾಜ್ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.

ಬುಧವಾರವಷ್ಟೇ ಅತೀಕ್‌ನ ಆಪ್ತ ಜಾಫರ್ ಅಹ್ಮದ್ ಮನೆಯನ್ನು ನೆಲಸಮಗೊಳಿಸಲಾಗಿತ್ತು. ಆ ಮನೆಯಿಂದ ವಶಪಡಿಸಿಕೊಳ್ಳಲಾದ ಏರ್ ಗನ್ ಅನ್ನು ಅಲಿ ಮನೆಯಿಂದ ತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೆಲಸಮಕ್ಕೂ ಮುನ್ನ ಅಧಿಕಾರಿಗಳು ಅಲಿ ಅವರ ಮನೆಯಿಂದ ಗೃಹೋಪಯೋಗಿ ವಸ್ತುಗಳನ್ನು ಹೊರ ಹಾಕಿದರು. ಮನೆ ಮುಂದೆ ನಿಂತಿದ್ದ ಅಲಿ, ನೆಲಸಮ ಮಾಡುವುದನ್ನು ಅಸಹಾಯಕತೆಯಿಂದ ನೋಡುತ್ತಿದ್ದರು.

‘ಈ ಮನೆ ನನ್ನ ಮಗನ ಹೆಸರಿನಲ್ಲಿದೆ. ಅವನು ಕಷ್ಟಪಟ್ಟು ಸಂಪಾದಿಸಿದ ಹಣದಿಂದ ಇದನ್ನು ನಿರ್ಮಿಸಿದ್ದಾನೆ. ಅಭಿವೃದ್ಧಿ ಪ್ರಾಧಿಕಾರ ನಮಗೆ ಯಾವುದೇ ನೋಟಿಸ್ ನೀಡಿಲ್ಲ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

‘ನನಗೆ ಅತೀಕ್ ಅಹ್ಮದ್ ಅವರ ಪರಿಚಯವಿಲ್ಲ. ವೈಯಕ್ತಿಕ ದ್ವೇಷ ಹೊಂದಿರುವವರು ನನ್ನನ್ನು ಗುರಿಯಾಗಿಸುತ್ತಿದ್ದಾರೆ’ ಎಂದು ಅಲಿ ಹೇಳಿದರು.

ಕಳೆದ ವಾರ ಧೂಮನ್‌ಗಂಜ್‌ ಪೊಲೀಸ್ ಠಾಣೆ ವ್ಯಾಪ್ತಿಯ ಜೈತಿಪುರದಲ್ಲಿ ಉಮೇಶ್‌ ಪಾಲ್‌ ಮತ್ತು ಅವರ ಭದ್ರತಾ ಸಿಬ್ಬಂದಿಯನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಬಿಎಸ್‌ಪಿ ಶಾಸಕ ರಾಜು ಪಾಲ್ ಕೊಲೆ ಪ್ರಕರಣದಲ್ಲಿ ಪಾಲ್ ಪ್ರಮುಖ ಸಾಕ್ಷಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT