ಸೋಮವಾರ, ಜನವರಿ 17, 2022
20 °C

ಉತ್ತರ ಪ್ರದೇಶದಲ್ಲಿ ಕೃಷಿ ಬಳಕೆಯ ವಿದ್ಯುತ್‌ ದರ ಶೇ 50ರಷ್ಟು ಕಡಿತ: ಸಿಎಂ ಘೋಷಣೆ

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

ಲಖನೌ: ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶದ ಬಿಜೆಪಿ ಸರ್ಕಾರವು ಕೃಷಿ ಬಳಕೆಯ ವಿದ್ಯುತ್ ದರದಲ್ಲಿ ಶೇಕಡಾ 50 ರಷ್ಟು ಕಡಿತ ಘೋಷಿಸಿದೆ.

ವಿಧಾನಸಭೆ ಚುನಾವಣೆಗೆ ಮುನ್ನ ರೈತರನ್ನು ತಮ್ಮತ್ತ ಸೆಳೆಯುವ ಪ್ರಯತ್ನದ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರದ ನಿರ್ಧಾರವನ್ನು ವಿಶ್ಲೇಷಿಸಲಾಗಿದೆ.

ಈ ನಿರ್ಧಾರವು ಗ್ರಾಮೀಣ ಮತ್ತು ಅರೆ-ಗ್ರಾಮೀಣ ಪ್ರದೇಶಗಳ 13 ಲಕ್ಷಕ್ಕೂ ಹೆಚ್ಚು ಬಳಕೆದಾರರಿಗೆ ನೇರವಾಗಿ ಪ್ರಯೋಜನವಾಗಲಿದೆ ಎಂದು ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ.

ಮುಖ್ಯಮಂತ್ರಿಗಳ ಕಚೇರಿ ಹೊರಡಿಸಿರುವ ಆದೇಶದಲ್ಲಿ, ಉದ್ದೇಶಿತ ಗ್ರಾಹಕರನ್ನು ನಾಲ್ಕು ವರ್ಗಗಳಾಗಿ ವಿಂಗಡಿಸಲಾಗಿದೆ. ಮೀಟರ್, ಮೀಟರ್ ಇಲ್ಲದ, ಇಂಧನ ದಕ್ಷತೆಯುಳ್ಳ ಪಂಪ್‌ಗಳು ಮತ್ತು ಮೀಟರ್ ಸಹಿತ ವಿದ್ಯುತ್ ಪಡೆಯುವ ನಗರ ಪ್ರದೇಶದ ರೈತರು ಎಂದು ವಿಭಾಗಿಸಲಾಗಿದೆ. ಇದರ ಆಧಾರದ ಮೇಲೆ ದರ ಕಡಿತದ ಯೋಜನೆಗಳನ್ನು ಪ್ರಕಟಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು