ಶುಕ್ರವಾರ, ಜೂನ್ 25, 2021
28 °C

ಉತ್ತರ ಪ್ರದೇಶ: ಕಾರಲ್ಲಿ ಉಸಿರುಗಟ್ಟಿ ನಾಲ್ವರು ಮಕ್ಕಳ ಸಾವು

ಪಿಟಿಐ‌ Updated:

ಅಕ್ಷರ ಗಾತ್ರ : | |

ಭಾಗ್ಪತ್ (ಉ. ಪ್ರದೇಶ): ಆಟವಾಡುತ್ತಿದ್ದ ವೇಳೆ ಕಾರಿನಲ್ಲಿ ಸಿಕ್ಕಿಬಿದ್ದ ನಾಲ್ವರು ಮಕ್ಕಳು ಉಸಿರುಗಟ್ಟಿ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದಿಂದ ವರದಿಯಾಗಿದೆ.

ಘಟನೆಯಲ್ಲಿ ಓರ್ವ ಬಾಲಕನನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಚಾಂದಿನಗರ ಪ್ರದೇಶದ ಸಿಂಗೌಲಿ ಟಾಗಾ ಗ್ರಾಮದಲ್ಲಿ ಅನಿಲ್ ತ್ಯಾಗಿ ಎಂಬವರ ಮನೆಯ ಹೊರಗಡೆ ಪಾರ್ಕ್ ಮಾಡಲಾಗಿದ್ದ ಕಾರಿನೊಳಗೆ ಐವರು ಮಕ್ಕಳು ಆಟವಾಡುತ್ತಿದ್ದರು. ಆಕಸ್ಮಾತ್ ಕಾರ್ ಲಾಕ್ ಆದ ಕಾರಣ ಮಕ್ಕಳು ಕಾರಿನೊಳಗೆ ಸಿಕ್ಕಿಬಿದ್ದಿದ್ದಾರೆ. ಬಳಿಕ ಉಸಿರಾಡಲು ಸಾಧ್ಯವಾಗದೆ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

ಮೃತಪಟ್ಟ ಮಕ್ಕಳನ್ನು ನಿಯತಿ (8), ವಂದನಾ (8), ಅಕ್ಷಯ್ (4), ಕೃಷ್ಣ (7) ಮತ್ತು ಶಿವಾಂಶ್ (8) ಎಂದು ಗುರುತಿಸಲಾಗಿದೆ. ಶಿವಾಂಶ್ ಹೊರತುಪಡಿಸಿ ಇತರೆಲ್ಲರು ಸ್ಥಳದಲ್ಲೇ ಮೃತಪಟ್ಟಿದ್ದರು.

ಕಾರು ಮಾಲೀಕನ ಕ್ರೂರ ನಡೆಯಿಂದಾಗಿ ಈ ಅವಘಡ ಸಂಭವಿಸಿದೆ ಎಂದು ನೆರೆಹೊರೆಯವರು ಆರೋಪಿಸಿದ್ದಾರೆ. ಘಟನೆ ಬಗ್ಗೆ ಪೂಲೀಸರು ತನಿಖೆ ನಡೆಸುತ್ತಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು