ಅಲೀಗಡ: ಸಮಾಜವನ್ನು ಧ್ರುವೀಕರಿಸುವ ಪ್ರಯತ್ನಗಳ ಬಗ್ಗೆ ರೈತರು ಎಚ್ಚರದಿಂದ ಇರಬೇಕು. ಹಿಂದೂ–ಮುಸ್ಲಿಂ ವಿಚಾರವನ್ನು ಮುನ್ನೆಲೆಗೆ ತಂದು ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಸ್ಥಾಪಿತ ಹಿತಾಸಕ್ತಿಗಳು ಪ್ರಯತ್ನಿಸಬಹುದು ಎಂದು ಭಾರತೀಯ ಕಿಸಾನ್ಯ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ಹೇಳಿದ್ದಾರೆ.

ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದರು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಆಯ್ಕೆಯು ಎಷ್ಟು ಮಹತ್ವದ್ದು ಎಂಬುದರ ಬಗ್ಗೆ ರೈತರಿಗೆ ಪೂರ್ಣ ಅರಿವಿದೆ. ಅವರಿಗೆ ಯಾರೂ ಹೇಳಿಕೊಡುವ ಅಗತ್ಯ ಇಲ್ಲ ಎಂದರು.

‘ಮುಂದಿನ ಕೆಲವು ವಾರಗಳಲ್ಲಿ ರಾಜಕೀಯ ಚರ್ಚೆಯಲ್ಲಿ ಹಿಂದೂ–ಮುಸ್ಲಿಂ, ಜಿನ್ನಾ ಮುಂತಾದವುಗಳು ಸಾಮಾನ್ಯವಾಗಿ ಕೇಳಿ ಬರಲಿವೆ. ಗಮನ ಬೇರೆಡೆಗೆ ಸೆಳೆಯುವ ಇಂತಹ ಪ್ರಯತ್ನಗಳ ಬಗ್ಗೆ ಎಚ್ಚರದಿಂದ ಇರಬೇಕು’ ಎಂದು ಟಿಕಾಯತ್ ಹೇಳಿದ್ದಾರೆ.

ಹಿಂದೂ–ಮುಸ್ಲಿಂ ಮತ್ತು ಜಿನ್ನಾ ಮಾರ್ಚ್ 15ರವರೆಗೆ ಉತ್ತರ ಪ್ರದೇಶದ ಅಧಿಕೃತ ಅತಿಥಿಗಳಾಗಿ ಇರಲಿದ್ಧಾರೆ ಎಂದೂ ಅವರು ವ್ಯಂಗ್ಯವಾಡಿದ್ದಾರೆ.

ರೈತರು ತಮ್ಮ ಉತ್ಪನ್ನಗಳನ್ನು ಅದಕ್ಕೆ ಮಾಡಿದ ವೆಚ್ಚದ ಅರ್ಧ ದರಕ್ಕೆ ಮಾರಾಟ ಮಾಡಬೇಕಾಗಿ ಬಂದಿದೆ. ಹೀಗಿರುವಾಗ, ಯಾರಿಗೆ ಮತ ನೀಡಬೇಕು ಎಂಬುದನ್ನು ಅವರಿಗೆ ಹೇಳಿಕೊಡುವ ಅಗತ್ಯವೇನೂ ಇಲ್ಲ ಎಂದು ಟಿಕಾಯತ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.