ಶುಕ್ರವಾರ, ಡಿಸೆಂಬರ್ 3, 2021
20 °C

ದೀಪಾವಳಿಗೆ ಉರ್ದು ಭಾಷೆಯಲ್ಲಿ ಶುಭಾಶಯ: ಫ್ಯಾಬ್‌ ಇಂಡಿಯಾ ಬಹಿಷ್ಕಾರಕ್ಕೆ ಕರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಪರಂಪರಾಗತ ದಿರಿಸುಗಳ ಮಳಿಗೆ ಫ್ಯಾಬ್‌ ಇಂಡಿಯಾದ ದೀಪಾವಳಿ ದಿರಿಸು ಸಂಗ್ರಹದ ಜಾಹೀರಾತೊಂದು ವಿವಾದಕ್ಕೆ ಕಾರಣವಾಗಿದೆ. ದೀಪಾವಳಿಗಾಗಿ ‘ಜಶ್ನ್‌–ಎ–ರಿವಾಜ್‌’ ಎಂಬ ಹೆಸರಿನ ಸಂಗ್ರಹವು ಕಾದಿದೆ ಎಂಬ ಅರ್ಥದ ಜಾಹೀರಾತಿಗೆ ಕೆಲವರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. 

ಜಶ್ನ್–ಎ–ರಿವಾಜ್ ಎಂಬುದು ಉರ್ದು ಭಾಷೆಯಲ್ಲಿನ ಶುಭಾಶಯ. ಹಿಂದೂಗಳ ಹಬ್ಬಕ್ಕೆ ಸಂಬಂಧಿಸಿದ ಶುಭಾಶಯವನ್ನು ಉರ್ದುವಿನಲ್ಲಿ ಮಾಡಿದ್ದಕ್ಕೆ ಬಿಜೆಪಿ ಸಂಸದರು, ನಾಯಕರು ಮತ್ತು ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಜಶ್ನ್ ಎ ರಿವಾಜ್ ಎಂಬುದು ದೀಪಾವಳಿಯಲ್ಲ. ಇದು ಹಿಂದೂಗಳ ಹಬ್ಬವನ್ನು 'ಅಬ್ರಹಾಮೀಕರಣಗೊಳಿಸುವ ಉದ್ದೇಶಪೂರ್ವಕ ಯತ್ನ’ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದರು. ಬಿಜೆಪಿಯ ಹಲವು ಕಾರ್ಯಕರ್ತರು ಈ ಟ್ವೀಟ್ ಅನ್ನು ಹಂಚಿಕೊಂಡಿದ್ದಾರೆ. ಫ್ಯಾಬ್‌ ಇಂಡಿಯಾ ಉತ್ಪನ್ನಗಳನ್ನು ಬಹಿಷ್ಕರಿಸಿ ಎಂದು ಕರೆ ನೀಡಿದ್ದಾರೆ.

‘ಫ್ಯಾಬ್‌ ಇಂಡಿಯಾ ಜಾತ್ಯತೀತ ವಾದ ಕಂಪನಿಯಾಗಿದ್ದರೆ, ನಾವು ಬೇರೆ ಅಂಗಡಿ ನೋಡಿಕೊಳ್ಳುತ್ತೇವೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಟ್ವೀಟ್ ಮಾಡಿದ್ದಾರೆ. 

ಪರಿಣಾಮವಾಗಿ, ಟ್ವಿಟರ್‌ನಲ್ಲಿ ಪ್ರಕಟವಾದ ಜಾಹೀರಾತು ಮತ್ತು ಜಶ್ನ್–ಎ–ರಿವಾಜ್ ಸಂಗ್ರಹದ ಕುರಿತು ಫ್ಯಾಷನ್‌ ನಿಯತಕಾಲಿಕವೊಂದರಲ್ಲಿ ಪ್ರಕಟವಾಗಿದ್ದ ಬರಹವನ್ನು ಸಂಸ್ಥೆ ಹಿಂದಕ್ಕೆ ಪಡೆದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು