ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಲಿತಾಂಶದಿಂದ ಅಮೆರಿಕ–ಭಾರತ ಬಾಂಧವ್ಯಕ್ಕೆ ಧಕ್ಕೆಯಾಗದು: ಗೋಪಾಲನ್ ಬಾಲಚಂದ್ರನ್

Last Updated 4 ನವೆಂಬರ್ 2020, 7:18 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಮತ್ತು ಅಮೆರಿಕ ಗಾಢವಾದ ಬಾಂಧವ್ಯ ಹೊಂದಿವೆ. ಅಮೆರಿಕದ ಚುನಾವಣೆ ಫಲಿತಾಂಶದಿಂದ ಇದಕ್ಕೆ ಧಕ್ಕೆಯಾಗದು ಎಂದು ಡೆಮಾಕ್ರಟಿಕ್ ಪಕ್ಷದ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಕಮಲಾ ಹ್ಯಾರಿಸ್ ಮಾವ, ಇನ್‌ಸ್ಟಿಟ್ಯೂಟ್ ಆಫ್‌ ಡಿಫೆನ್ಸ್ ಸ್ಟಡೀಸ್‌ನ ಮಾಜಿ ನಿರ್ದೇಶಕ ಗೋಪಾಲನ್ ಬಾಲಚಂದ್ರನ್ ಹೇಳಿದ್ದಾರೆ.

ಅಮೆರಿಕ ಚುನಾವಣೆಗೆ ಸಂಬಂಧಿಸಿ ಎಎನ್‌ಐ ಸುದ್ದಿಸಂಸ್ಥೆ ಜತೆ ಮಾತನಾಡಿದ ಅವರು, ಜೊ ಬೈಡನ್ ಅವರು ಚುನಾವಣೆ ಗೆಲ್ಲುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ. ಈ ಚುನಾವಣೆಯಲ್ಲಿ ಫ್ಲೊರಿಡಾ ಮಹತ್ವದ ಪಾತ್ರ ವಹಿಸುವ ಸಾಧ್ಯತೆ ಇದೆ. ಅಲ್ಲಿ ಒಂದು ವೇಳೆ ಡೊನಾಲ್ಡ್ ಟ್ರಂಪ್ ಅವರಿಗೆ ಸೋಲಾದರೆ ಅವರು ಚುನಾವಣೆಯಲ್ಲಿ ಸೋಲುವ ಸಾಧ್ಯತೆ ಹೆಚ್ಚು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಜಯ ಗಳಿಸಿದಲ್ಲಿ ಡೆಮಾಕ್ರಟ್‌ ಮತ್ತು ರಿಪಬ್ಲಿಕನ್ ನಡುವೆ ಭೇದವೆಣಿಸುವುದಿಲ್ಲ ಎಂಬ ಬೈಡನ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಅಮೆರಿಕವು ಇಂದು ನಿರ್ಣಾಯಕ ಸ್ಥಿತಿಯಲ್ಲಿದೆ. ರಾಜಕೀಯವಾಗಿ ನಾವು ಸ್ಪರ್ಧಿಸೋಣ, ಆದರೆ ಜತೆಯಾಗಿ ಕೆಲಸ ಮಾಡೋಣ ಎಂದು ಬೈಡನ್ ಹೇಳಿದ್ದಾರೆ. ಆದರೆ ಟ್ರಂಪ್ ವಿಚಾರದಲ್ಲಿ ಹಾಗಿಲ್ಲ. ಟ್ರಂಪ್ ಅವರು ಮುಂದಿನ ನಾಲ್ಕು ವರ್ಷಗಳಿಗೆ ಆಯ್ಕೆಯಾದರೆ ಅಮೆರಿಕಕ್ಕೆ ದೇವರೇ ಸಹಾಯ ಮಾಡಬೇಕು’ ಎಂದು ಹೇಳಿದ್ದಾರೆ.

ಸದ್ಯ ಅಮೆರಿಕದಲ್ಲಿ ಮತ ಎಣಿಕೆ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಜೋ ಬೈಡನ್ ಹಾಗೂ ಡೊನಾಲ್ಡ್ ಟ್ರಂಪ್ ಮಧ್ಯೆ ತೀವ್ರ ಹಣಾಹಣಿ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT