ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾರಿಸ್ ಹವಾಮಾನ ಒಪ್ಪಂದ ಪರಿಧಿಯಿಂದ ನಿರ್ಗಮಿಸಿದ ಅಮೆರಿಕ

Last Updated 4 ನವೆಂಬರ್ 2020, 10:07 IST
ಅಕ್ಷರ ಗಾತ್ರ

ವಾಷಿಂಗ್ಟನ್: ಚುನಾವಣೆಯ ಅನಿಶ್ಚಿತತೆ ಪರಿಸ್ಥಿತಿಯ ನಡುವೆಯೂ ಅಮೆರಿಕ ಬುಧವಾರ ಐತಿಹಾಸಿಕ ‘ಪ್ಯಾರಿಸ್ ಹವಾಮಾನ ಒಡಂಬಡಿಕೆ’ಯಿಂದ ಹೊರಬಂದಿದೆ.

ಈ ಒಡಂಬಡಿಕೆಯಿಂದ ಅಮೆರಿಕ ಹೊರಗುಳಿಯಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಕಟಿಸಿದ್ದ ಮೂರು ವರ್ಷಗಳ ತರುವಾಯ ಈ ಬೆಳವಣಿಗೆ ನಡೆದಿದೆ.

ಟ್ರಂಪ್‌ ಅವರು, ಈ ಒಡಂಬಡಿಕೆಯಿಂದ ಹೊರಬರುವ ತೀರ್ಮಾನವನ್ನು 2017ರಲ್ಲಿಯೇ ಪ್ರಕಟಿಸಿದ್ದರು. ಆದರೆ, ಈ ಕುರಿತು ಕಳೆದ ವರ್ಷವಷ್ಟೇ ವಿಶ್ವಸಂಸ್ಥೆಗೆ ಅಧಿಕೃತವಾಗಿ ತಿಳಿಸಲಾಗಿತ್ತು. ಒಂದು ವರ್ಷ ಕಾಯುವ ಅವಧಿ ಬುಧವಾರ ಅಂತ್ಯಗೊಂಡಿತ್ತು. ಹಿಂದೆಯೇ ಒಡಂಬಡಿಕೆಯಿಂದ ಅಮೆರಿಕ ಹೊರ ಉಳಿದಿರುವ ನಿರ್ಧಾರವನ್ನು ವಿಶ್ವಸಂಸ್ಥೆ ಪ್ರಕಟಿಸಿದೆ.

ಜಾಗತಿಕ ತಾಪಮಾನದ ಪ್ರಮಾಣವನನ್ನು 2 ಡಿಗ್ರಿ ಸೆಲ್ಸಿಯಸ್‌ಗೆ ಮಿತಿಗೊಳಿಸಲು ಒತ್ತು ನೀಡುವುದು ಜಾಗತಿಕ ಹವಾಮಾನ ಒಪ್ಪಂದದ ಉದ್ದೇಶವಾಗಿತ್ತು. ಆದರೆ, ‘ಇದು ಆರ್ಥಿಕತೆಯ ಮೇಲೆ ಪರಿಣಾಮ ಬೀರಲಿದೆ. ದೇಶದಲ್ಲಿ ಇದರಿಂದ 2025 ವೇಳೆಗೆ ಸುಮಾರು 25 ಲಕ್ಷ ಉದ್ಯೋಗ ನಷ್ಟವಾಗಬಹುದು’ ಎಂದು ವಾದಿಸಿದ್ದ ಟ್ರಂಪ್ ಒಪ್ಪಂದವನ್ನು ವಿರೋಧಿಸಿದ್ದರು.

ಒಪ್ಪಂದದಿಂದ ಹೊರಬಂದಿರುವ ಏಕೈಕ ರಾಷ್ಟ್ರ ಅಮೆರಿಕ ಆಗಿದೆ. ಆದಾಗಿಯೂ ಅಮೆರಿಕ ಈ ಸಂಬಂಧಿತ ಚರ್ಚೆಗಳಲ್ಲಿ ಭಾಗವಹಿಸಿ, ತನ್ನ ಅಭಿಪ್ರಾಯವನ್ನು ದಾಖಲಿಸಬಹುದಾಗಿದೆ. ಆದರೆ, ಅದಕ್ಕೆ ವೀಕ್ಷಕ ಸ್ಥಾನಮಾನವಷ್ಟೇ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT