ಮಹಿಳೆಯರಿಗೆ ಜೀನ್ಸ್ ನಿಷೇಧಿಸಿದ ಉತ್ತರ ಪ್ರದೇಶ ಖಾಪ್ ಪಂಚಾಯತ್

ಮುಜಾಫರ್ನಗರ: ಉತ್ತರ ಪ್ರದೇಶದ ಮುಜಾಫ್ಫರನಗರ ಜಿಲ್ಲೆಯ ಖಾಪ್ ಪಂಚಾಯತ್ ಮಹಿಳೆಯರಿಗೆ ಜೀನ್ಸ್ ಹಾಗೂ ಪುರುಷರಿಗೆ ಶಾರ್ಟ್ಸ್ ಧರಿಸುವುದನ್ನು ನಿರ್ಬಂಧಿಸಿದೆ.
‘ಜೀನ್ಸ್ ಉಡುಗೆಯು ಪಾಶ್ಚಿಮಾತ್ಯ ಸಂಸ್ಕೃತಿಯ ಭಾಗವಾಗಿದೆ. ಇದರ ಬದಲು ಜನರು ಭಾರತೀಯ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಬೇಕು’ ಎಂದೂ ರಜಪೂತ್ ಸಮುದಾಯದ ಖಾಪ್ ಪಂಚಾಯತ್ ಸಲಹೆ ನೀಡಿದೆ.
ಛಾತ್ರ್ವಾಲ್ ಪೊಲೀಸ್ ಠಾಣೆಯ ವ್ಯಾಪ್ತಿಯ ಪಿಪಲ್ಷಾ ಗ್ರಾಮದಲ್ಲಿ ಮಾರ್ಚ್ 2ರಂದು ಪಂಚಾಯತ್ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಖಾಪ್ ಪಂಚಾಯತ್ನ ನಿರ್ಧಾರವನ್ನು ತಿಳಿಸಿದ ಸಮುದಾಯದ ಮುಖಂಡ ಹಾಗೂ ಕಿಸಾನ್ ಸಂಘದ ಮುಖ್ಯಸ್ಥ ಠಾಕೂರ್ ಪುರಣ್ ಸಿಂಗ್ ‘ಮಹಿಳೆಯರು ಜೀನ್ಸ್ ಧರಿಸುವುದನ್ನು ಹಾಗೂ ಪುರುಷರು ಶಾರ್ಟ್ಸ್ ಧರಿಸುವುದನ್ನು ನಿಷೇಧಿಸಲಾಗಿದೆ’ ಎಂದರು.
‘ಜೀನ್ಸ್ ಪಾಶ್ಚಾತ್ಯ ಸಂಸ್ಕೃತಿಯ ಉಡುಗೆ. ಅದರ ಬದಲಾಗಿ ಸಾಂಪ್ರದಾಯಿಕ ಉಡುಗೆಗಳಾದ ಸೀರೆ, ಘಾಘ್ರಾ ಮತ್ತು ಸಲ್ವಾರ್ ಕಮೀಜ್ ಧರಿಸಬೇಕು. ಈ ಆಜ್ಞೆಯನ್ನು ಉಲ್ಲಂಘಿಸಿದವರಿಗೆ ಶಿಕ್ಷೆ ನೀಡಲಾಗುವುದು ಅಲ್ಲದೇ, ಸಮುದಾಯದಿಂದ ಬಹಿಷ್ಕಾರವನ್ನೂ ಹಾಕಲಾಗುವುದು’ ಎಂದೂ ಅವರು ಎಚ್ಚರಿಕೆ ನೀಡಿದರು.
ಮುಂಬರುವ ಪಂಚಾಯತಿ ಚುನಾವಣೆಯಲ್ಲಿ ಪರಿಶಿಷ್ಟ ಜಾತಿಯವರಿಗೆ ಮೀಸಲಾತಿ ನೀಡುವ ಉತ್ತರ ಪ್ರದೇಶ ಸರ್ಕಾರದ ನಿರ್ಧಾರವನ್ನೂ ಖಾಪ್ ಪಂಚಾಯತ್ ವಿರೋಧಿಸಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.