ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಾಖಂಡ | ಹಿಮಪಾತಕ್ಕೆ ಸಿಲುಕಿರುವ 21 ಪರ್ವತಾರೋಹಿಗಳು; ರಕ್ಷಣೆ ಕಾರ್ಯ ಚುರುಕು

Last Updated 5 ಅಕ್ಟೋಬರ್ 2022, 1:14 IST
ಅಕ್ಷರ ಗಾತ್ರ

ಡೆಹ್ರಾಡೂನ್‌: ಉತ್ತರಾಖಂಡ್​​ ರಾಜ್ಯದಲ್ಲಿ ಪರ್ವತಾರೋಹಣಕ್ಕೆ ತೆರಳಿದ್ದ 21ಜನರು ಹಿಮಪಾತಕ್ಕೆಸಿಲುಕಿದ್ದಾರೆಎಂದು ವರದಿಯಾಗಿದೆ.

ಇಲ್ಲಿನ ಘರ್ವಾಲ್‌ ಪ್ರದೇಶದಲ್ಲಿರುವ ದ್ರೌಪದಿ ಪರ್ವತದ ದಂಡ–2 ಶಿಖರಪ್ರದೇಶದಲ್ಲಿ ಹಿಮಪಾತವಾಗಿದೆಎಂದು ಪೊಲೀಸರು ಹೇಳಿದ್ದಾರೆ.

29ಜನರು ಪರ್ವತಾರೋಹಣಕ್ಕೆ ತೆರಳಿದ್ದರು. ಇವರ ಪೈಕಿ 21ಜನರು ಹಿಮಪಾತಕ್ಕೆ ಸಿಲುಕಿದ್ದಾರೆ. 9ಜನರನ್ನು ರಕ್ಷಣೆ ಮಾಡಲಾಗಿದೆ ಎಂದು ರಕ್ಷಣೆ ಕಾರ್ಯಾಚರಣೆ ಮಾಡುತ್ತಿರುವ ಅಧಿಕಾರಿಗಳು ಹೇಳಿದ್ದಾರೆ.

ಮಂಗಳವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಹಿಮಪಾತವಾಯಿತು ಎಂದು ಪರ್ವತರೋಹಿಯೊಬ್ಬರು ಮಾಹಿತಿ ನೀಡಿದ್ದಾರೆ.ರಾಷ್ಟ್ರೀಯ ಹಾಗೂ ರಾಜ್ಯ ವಿಪತ್ತು ನಿರ್ವಹಣ ತಂಡಗಳು, ಐಟಿಬಿಪಿ ಯೋಧರು, ಸ್ಥಳೀಯ ಅಗ್ನಿಶಾಮಕ ಸಿಬ್ಬಂದಿಗಳುಘಟನಾ ಸ್ಥಳಕ್ಕೆ ಹೋಗಿದ್ದು ರಕ್ಷಣೆ ಕಾರ್ಯಾಚರಣೆ ಮಾಡುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ರಕ್ಷಣೆ ಕಾರ್ಯಕ್ಕೆ ನೆರವು ನೀಡುವಂತೆ ಮುಖ್ಯಮಂತ್ರಿ ದಾಮಿ ಅವರು ಕೇಂದ್ರ ರಕ್ಷಣಾಸಚಿವ ರಾಜನಾಥ್‌ ಸಿಂಗ್‌ ಅವರಿಗೆಮನವಿ ಮಾಡಿದ್ದರು. ಈ ಬಗ್ಗೆ ಅವರು ಟ್ವಿಟ್‌ ಮಾಡಿದ್ದಾರೆ.

ಪರ್ವತಾರೋಹಣಕ್ಕೆ ತೆರಳಿದವರುಉತ್ತರ ಕಾಶಿಯ ನೆಹರು ಪರ್ವತಾರೋಹಣ ಸಂಸ್ಥೆಯವರು ಎಂದು ತಿಳಿದು ಬಂದಿದೆ. ಇವರನ್ನುರಕ್ಷಿಸಲು ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಗಳನ್ನು ಕಾರ್ಯಾಚರಣೆಗೆ ನಿಯೋಜಿಸಲಾಗಿದೆ ಎಂದು ಉತ್ತರಾಖಂಡಪೊಲೀಸ್ ಮುಖ್ಯಸ್ಥ ಅಶೋಕ್ ಕುಮಾರ್ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ....

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT