ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಲಸಿಕೆ ಕಾರ್ಯತಂತ್ರ ಸರ್ವಸಮಾನವಾಗಿದೆ: 'ಸುಪ್ರೀಂ'ಗೆ ಕೇಂದ್ರದ ಹೇಳಿಕೆ

Last Updated 10 ಮೇ 2021, 11:44 IST
ಅಕ್ಷರ ಗಾತ್ರ

ನವದೆಹಲಿ: ‘ಕೋವಿಡ್‌ ಲಸಿಕೆ ಕಾರ್ಯತಂತ್ರವು ಸರ್ವಸಮಾನ, ನ್ಯಾಯಸಮ್ಮತ ಹಾಗೂ ತಾರತಮ್ಯರಹಿತವಾಗಿದ್ದು,ನ್ಯಾಯಾಂಗವು ಅತ್ಯುತ್ಸಾಹದಿಂದ ಹಸ್ತಕ್ಷೇಪ ಮಾಡಿದ್ದೇ ಆದರೆಅನಿರೀಕ್ಷಿತ ಪರಿಣಾಮಗಳು ಎದುರಾಬಹುದು‘ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಕೋವಿಡ್‌–19 ನಿರ್ವಹಣೆಗೆ ಕುರಿತು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್‌ನ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಇದನ್ನು ತಿಳಿಸಲಾಗಿದೆ.

‘ಪಿಡುಗು ದಿಢೀರನೆ ಉಲ್ಬಣಿಸಿರುವುದು, ಲಸಿಕೆಯ ಸೀಮಿತ ಲಭ್ಯತೆ ಹಾಗೂ ಅದರ ಸೂಕ್ಷ್ಮತೆಗಳಿಂದಾಗಿ ಏಕಕಾಲಕ್ಕೆ ಇಡೀ ದೇಶಕ್ಕೆಲಸಿಕೆ ಪೂರೈಸಲು ಸಾಧ್ಯವಾಗುವುದಿಲ್ಲ‘ ಎಂದು ಸರ್ಕಾರ ತಿಳಿಸಿದೆ.

‘ಸಂವಿಧಾನದ 14 ಮತ್ತು 21ನೇ ವಿಧಿಯಡಿಯಲ್ಲಿ ಸೂಚಿಸಲಾದ ಅಂಶಗಳಿಗೆ ಅನುಗುಣವಾಗಿ ಪರಿಣಿತರದೊಂದಿಗೆ ಹಲವು ಬಾರಿ ಚರ್ಚಿಸಿಯೇ ಕೇಂದ್ರ ಸರ್ಕಾರ ಲಸಿಕೆ ನೀತಿಯನ್ನು ರೂಪಿಸಿದೆ. ಇಂತಹ ಬೃಹತ್‌ ಪಿಡುಗನ್ನು ನಿಭಾಯಿಸುವಾಗ ರಾಜ್ಯ ಸರ್ಕಾರಗಳು ಮತ್ತು ಲಸಿಕೆ ಉತ್ಪಾದಕರಿಗೆ ಯಾವುದೇ ಹಸ್ತಕ್ಷೇಪ ಇರಬಾರದು. ಸಾರ್ವಜನಿಕರ ಹಿತಾಸಕ್ತಿಯ ಸಲುವಾಗಿ ಇಲ್ಲಿ ಕಾರ್ಯಾಂಗವೇ ಹೆಚ್ಚಿನ ಪಾತ್ರ ವಹಿಸಬೇಕಾಗುತ್ತದೆ’ ಎಂದು ಕೇಂದ್ರ ಸರ್ಕಾರ ಅಭಿಪ್ರಾಯಪಟ್ಟಿದೆ.

‘ನ್ಯಾಯಾಂಗ ಇಲ್ಲಿ ಅತ್ಯುತ್ಸಾಹದಿಂದ ಹಸ್ತಕ್ಷೇಪ ನಡೆಸಿದ್ದೇ ಆದರೆ ಪರಿಣಿತರ ಸಲಹೆ ಅಥವಾ ಆಡಳಿತಾತ್ಮಕ ಅನುಭವದ ಕೊರತೆಯಿಂದ, ವಿಜ್ಞಾನಿಗಳು, ವೈದ್ಯರು, ಕಾರ್ಯಾಂಗದವರಿಗೆ ವಿಶಿಷ್ಟ ಪರಿಹಾರೋಪಾಯಗಳನ್ನು ಕಂಡುಕೊಳ್ಳುವ ಅವಕಾಶ ಸಿಗದೆ ಅನಿರೀಕ್ಷಿತ ಪರಿಣಾಮಗಳು ಎದುರಾಗಬಹುದು’ ಎಂದು ತನ್ನ 200 ಪುಟಗಳ ಪ್ರಮಾಣಪತ್ರದಲ್ಲಿ ತಿಳಿಸಿದೆ.

‘ದೇಶದ ಎಲ್ಲೆಡೆಯ ಜನರ ಒಟ್ಟಾರೆ ಹಿತಾಸಕ್ತಿ ಗಮನಿಸಿಯೇ ಇಷ್ಟು ದೊಡ್ಡ ಪಿಡುಗಿನ ವಿರುದ್ಧ ಹೋರಾಡುವ ಕಾರ್ಯತಂತ್ರ ರೂಪಿಸಲಾಗಿರುತ್ತದೆ. ಇಲ್ಲಿ ಕಾರ್ಯಾಂಗದ ವಿವೇಚನೆಯಲ್ಲಿ ನಂಬಿಕೆ ಇಡಬೇಕು’ ಎಂದು ಕೇಳಿಕೊಂಡಿದೆ.

‘ಲಸಿಕೆ ದರ ವಿಚಾರ ಸಮಾಜದ ಕಟ್ಟಕಡೆಯ ಬಳಕೆದಾರರಿಗೆ ಯಾವುದೇ ಪರಿಣಾಮ ಬೀರುವುದಿಲ್ಲ, ಏಕೆಂದರೆ ಎಲ್ಲಾ ರಾಜ್ಯಗಳೂ ಉಚಿತವಾಗಿ ಲಸಿಕೆ ನೀಡುವುದಾಗಿ ಹೇಳಿವೆ. ಸರ್ಕಾರದ ಹಣದಿಂದ ಎರಡು ಔಷಧ ತಯಾರಿಕಾ ಕಂಪನಿಗಳೇನೂ ಶ್ರೀಮಂತಗೊಳ್ಳುವುದಿಲ್ಲ. ಇತರ ಔಷಧ ತಯಾರಿಕಾ ಕಂಪನಿಗಳಿಗೆ ಲಸಿಕೆ ಉತ್ಪಾದನೆಗೆ ಅನುಮತಿ ನೀಡುವ ವಿಚಾರವೂ ದೊಡ್ಡದಲ್ಲ, ಆದರೆ ಕಚ್ಚಾ ವಸ್ತುವಿನ ಲಭ್ಯವಾಗದಿದ್ದರೆ ಶೀಘ್ರ ಅಧಿಕ ಪ್ರಮಾಣದಲ್ಲಿ ಉತ್ಪಾದಿಸಲು ಸಾಧ್ಯವಿಲ್ಲ’ ಎಂದು ತಿಳಿಸಲಾಗಿದೆ.

‘ಜಗತ್ತಿನೆಲ್ಲೆಡೆ ಲಸಿಕೆಗೆ ಭಾರಿ ಬೇಡಿಕೆ ಇದೆ. ಇದಕ್ಕೆ ರಾಜತಾಂತ್ರಿಕ ಮಟ್ಟದಲ್ಲಿ ತೊಡಗಿಕೊಂಡಿರುವ ಕಾರ್ಯಾಂಗ ಮೂಲಕವೇ ಪರಿಹಾರ ಕಂಡುಕೊಳ್ಳಬೇಕಿದೆ. 1970ರ ಹಕ್ಕುಸ್ವಾಮ್ಯ ಕಾಯ್ದೆಯಲ್ಲಿ ಬರುವ ಟ್ರಿಪ್ಸ್ ಒಪ್ಪಂದ ಮತ್ತು ದೋಹಾ ಘೋಷಣೆಯಂತೆ ಭಾರತದ ಹಿತಾಸಕ್ತಿಗೆ ಯಾವುದೇ ಧಕ್ಕೆ ಆಗದ ರೀತಿಯಲ್ಲಿ ಪರಿಹಾರ ಕಂಡುಕೊಳ್ಳುವಲ್ಲಿ ಕೇಂದ್ರ ಸರ್ಕಾರ ಸಕ್ರಿಯವಾಗಿ ತೊಡಗಿಕೊಂಡಿದೆ‌’ ಎಂದು ಪ್ರಮಾಣಪತ್ರದಲ್ಲಿ ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT