ಶುಕ್ರವಾರ, ಆಗಸ್ಟ್ 12, 2022
22 °C

ಗಾಲ್ವನ್ ಸಂಘರ್ಷಕ್ಕೆ ಒಂದು ವರ್ಷ: ಹುತಾತ್ಮ ಯೋಧರಿಗೆ ಗೌರವ ನಮನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಒಂದು ವರ್ಷದ ಹಿಂದೆ ಲಡಾಖ್‌ನ ಗಾಲ್ವನ್ ಕಣಿವೆಯಲ್ಲಿ ಚೀನಾದೊಂದಿಗಿನ ನಡೆದ  ಘರ್ಷಣೆಯಲ್ಲಿ ಹುತಾತ್ಮರಾದ 20 ಭಾರತೀಯ ಯೋಧರಿಗೆ ಸೇನಾಪಡೆ ಮುಖ್ಯಸ್ಥ ಜನರಲ್‌ ಎಂ.ಎಂ. ನರವಣೆ ನೇತೃತ್ವದಲ್ಲಿ ಮಂಗಳವಾರ ಗೌರವ ನಮನ ಸಲ್ಲಿಸಲಾಯಿತು.

ಕಳೆದ ವರ್ಷ ಜೂನ್‌ 15ರಂದು ಗಾಲ್ವನ್‌ ಘರ್ಷಣೆ ನಡೆದಿತ್ತು. ಈ ಸಂದರ್ಭದಲ್ಲಿ ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದ ಸೇನೆಯು,‘ವೀರ ಯೋಧರು ಪ್ರಾದೇಶಿಕ ಸಮಗ್ರತೆಯ ರಕ್ಷಣೆಗಾಗಿ ಅತ್ಯಂತ ಕಠಿಣ ಪ್ರದೇಶದಲ್ಲಿ ಎದುರಾಳಿಯೊಂದಿಗೆ ಸೆಣಸಾಡಿದ್ದಾರೆ. ದೇಶಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಅವರ ಈ  ತ್ಯಾಗವನ್ನು ರಾಷ್ಟ್ರ ಸದಾ ಸ್ಮರಿಸಲಿದೆ’ ಎಂದು ಹೇಳಿದೆ.

‘ಗಾಲ್ವನ್‌ ಕಣಿವೆಯಲ್ಲಿ ಹುತಾತ್ಮರಾದ ವೀರ ಹೃದಯಗಳಿಗೆ ಜನರಲ್‌ ಎಂ.ಎಂ ನರವಣೆ ಸೇರಿದಂತೆ ಭಾರತೀಯ ಸೇನೆಯ ಎಲ್ಲಾ ಶ್ರೇಣಿಯ ಅಧಿಕಾರಿಗಳು ಗೌರವ ನಮನ ಸಲ್ಲಿಸಿದ್ದಾರೆ’ ಎಂದು ಸೇನೆ ಟ್ವೀಟ್ ಮಾಡಿದೆ.

ಇದನ್ನೂ ಓದಿ... ಚೀನಾ ಗಡಿ ತಂಟೆ: ಗಾಲ್ವನ್ ಕಣಿವೆ ಸಂಘರ್ಷ, ಯೋಧರ ಬಲಿದಾನಕ್ಕೆ ವರ್ಷ

ಲೇಹ್‌ ಸೇನಾ ಶಿಬಿರದಲ್ಲೂ ಗಾಲ್ವನ್‌ನ ವೀರ ಯೋಧರಿಗೆ ಗೌರವ ನಮನ ಸಲ್ಲಿಸಲಾಯಿತು.

ಚೀನಾ ಯೋಧರೊಂದಿಗಿನ ಸಂಘರ್ಷದಲ್ಲಿ ಹುತಾತ್ಮರಾದ ಕರ್ನಲ್‌ ಬಿಕುಮಲ್ಲಾ ಸಂತೋಷ್‌ ಬಾಬು ಅವರಿಗೆ ಮರಣೋತ್ತರವಾಗಿ ಸೇನೆಯ ಎರಡನೇ ಅತಿ ಉನ್ನತ ಪ್ರಶಸ್ತಿಯಾದ ಮಹಾವೀರ ಚಕ್ರ ಘೋಷಿಸಲಾಗಿತ್ತು. ಇತರ ನಾಲ್ಕು ಯೋಧರಿಗೂ ವೀರ ಚಕ್ರ ಪ್ರಶಸ್ತಿ ಘೋಷಿಸಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು