ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಲಿನಲ್ಲಿರುವ ಸತ್ಯೇಂದರ್‌ ಜೈನ್ ವಿಡಿಯೊಗಳು ಕೇಜ್ರಿವಾಲ್ ಆಪ್ತರಿಂದಲೇ ಲೀಕ್: BJP

ಎಎಪಿಯ ಸತ್ಯೇಂದರ್‌ ಅವರ ಕೊಠಡಿಯನ್ನು ಸ್ವಚ್ಛಗೊಳಿಸುತ್ತಿರುವ ವಿಡಿಯೊ ಬಹಿರಂಗ ಮಾಡಿದ ಬಿಜಿಪಿ
Last Updated 27 ನವೆಂಬರ್ 2022, 14:23 IST
ಅಕ್ಷರ ಗಾತ್ರ

ನವದೆಹಲಿ: ಜೈಲಿನಲ್ಲಿರುವ ಆಮ್‌ ಆದ್ಮಿ ಪಕ್ಷದ ಸತ್ಯೇಂದರ್‌ ಜೈನ್‌ ಅವರ ಕೊಠಡಿಯನ್ನು 10 ಜನರು ಸೇರಿ ಸ್ವಚ್ಛಗೊಳಿಸುತ್ತಿರುವ ವಿಡಿಯೊವನ್ನು ಬಿಜೆಪಿ ಭಾನುವಾರ ಬಿಡುಗಡೆ ಮಾಡಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರಿಗೆ ಆಪ್ತವಾಗಿರುವ ಹಾಗೂ ಆಮ್‌ ಆದ್ಮಿ ಪಕ್ಷದ (ಎಎಪಿ) ‘ಉನ್ನತ ಹುದ್ದೆ’ಯಲ್ಲಿರುವವರೇ ಜೈನ್‌ ಅವರಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ನೀಡುತ್ತಿದ್ದಾರೆ ಎಂದೂ ಬಿಜೆಪಿ ಹೇಳಿದೆ.

ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್‌ ಪಾತ್ರ ಅವರು ಭಾನುವಾರ ಸುದ್ದಿಗೋಷ್ಠಿ ನಡೆಸಿ, ವಿಡಿಯೊವನ್ನು ಬಿಡುಗಡೆ ಮಾಡಿದರು. ‘ಜೈನ್‌ ಅವರಿಗೆ ಸಂಬಂಧಿಸಿದ ಈ ಎಲ್ಲಾ ವಿಡಿಯೊಗಳು ಮತ್ತು ಮಾಹಿತಿಗಳು ಜೈಲು ಅಧಿಕಾರಿಗಳಿಂದ ಬಹಿರಂಗವಾಗುತ್ತಿಲ್ಲ. ಬದಲಿಗೆ, ಕೇಜ್ರಿವಾಲ್‌ ಅವರಿಗೆ ಹತ್ತಿರವಾಗಿರುವ ಹಾಗೂಪಕ್ಷದ ‘ಉನ್ನತ ಹುದ್ದೆ’ಯಲ್ಲಿರುವವರೇ ಬಹಿರಂಗ ಮಾಡುತ್ತಿದ್ದಾರೆ. ಇವರ ಹೆಸರನ್ನು ಶೀಘ್ರದಲ್ಲಿಯೇ ಬಹಿರಂಗ ಪಡಿಸಲಾಗುವುದು’ ಎಂದರು.

‘ಜೈನ್‌ ಅವರ ಬಳಿ ಕೇಜ್ರಿವಾಲ್‌ ಅವರ ಕೆಲವು ರಹಸ್ಯಗಳಿವೆ. ಈ ರಹಸ್ಯಗಳು ಕೇಜ್ರಿವಾಲ್‌ ಅವರನ್ನು ‘ತೊಂದರೆ’ಗೆ ಈಡುಮಾಡಬಹುದು. ಆದ್ದರಿಂದಲೇ ಜೈನ್‌ ಅವರನ್ನು ಇನ್ನೂವರೆಗೂ ಸಚಿವ ಸಂಪುಟದಿಂದ ಕೈಬಿಡಲಾಗಿಲ್ಲ ಎಂದು ಪಕ್ಷದ ‘ಉನ್ನತ ಹುದ್ದೆ’ಯಲ್ಲಿರುವವರು ಮಾಹಿತಿ ನೀಡಿದ್ದಾರೆ’ ಎಂದರು.

‘ದೆಹಲಿಯ ಕಾರಾಗೃಹಗಳಲ್ಲಿ ‘ವಿಐಪಿ ಸಂಸ್ಕೃತಿ’ಗೆ ಅಂತ್ಯಹಾಡಿದ್ದೇವೆ ಎಂದು ಕೇಜ್ರಿವಾಲ್‌ ಅವರು ಹೇಳುತ್ತಾರೆ. ಆದರೆ, ಅಧಿಕಾರಿಗಳ ಒಪ್ಪಿಗೆ ಪಡೆಯದೇ ಜೈನ್‌ ಅವರಿಗೆ ಹಣ್ಣು, ತರಕಾರಿಗಳನ್ನು ನೀಡಲಾಗುತ್ತಿದೆ. ಇದು ದೆಹಲಿ ಕಾರಾಗೃಹ ನಿಯಮ, 2018ರ ಉಲ್ಲಂಘನೆ’ ಎಂದು ಅವರು ಆರೋಪಿಸಿದರು.

ನಿರ್ಲಜ್ಜ ಸುಳ್ಳುಗಾರ: ಸಂಬಿತ್‌ ಪಾತ್ರ ಅವರು ಅರವಿಂದ ಕೇಜ್ರಿವಾಲ್‌ ಅವರನ್ನು ‘ನಿರ್ಲಜ್ಜ ಸುಳ್ಳುಗಾರ’ ಎಂದು ಕರೆದಿದ್ದಾರೆ. ‘ಜೈನ್‌ ಅವರಿಗೆ ಮಸಾಜ್‌ ಮಾಡಿದ್ದು ಫಿಜಿಯೋಥೆರಪಿಸ್ಟ್‌ ಎಂದು ಕೇಜ್ರಿವಾಲ್‌ ಅವರು ವಾಹಿನಿಯೊಂದರಲ್ಲಿ ಹೇಳುತ್ತಾರೆ. ಆದರೆ, ಆತ ಫಿಜಿಯೊಥೆರಪಿಸ್ಟ್‌ ಅಲ್ಲ ಬದಲಿಗೆ ರೇಪಿಸ್ಟ್‌ (ಅತ್ಯಾಚಾರಿ) ಆಗಿದ್ದಾನೆ. ಕೇಜ್ರಿವಾಲ್‌ ಅವರು ವಾಹಿನಿಯೊಂದರಲ್ಲಿ ನಿರ್ಲಜ್ಜವಾಗಿ ಸುಳ್ಳು ಹೇಳಿದ್ದಾರೆ’ ಎಂದರು.

ಈ ಆರೋಪ ಸಂಬಂಧ ಎಎಪಿ ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ದೆಹಲಿ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿಬಿಜೆಪಿಯು ತಮ್ಮನ್ನು ಹಾಗೂ ತಮ್ಮ ಪಕ್ಷವನ್ನು ಟೀಕಿಸಲು ಜೈನ್ ಅವರ ವಿಡಿಯೊಗಳನ್ನು ಬಳಸಿಕೊಳ್ಳುತ್ತಿದೆ ಎಂದು ಕೇಜ್ರಿವಾಲ್‌ ಅವರು ಶನಿವಾರ ಕಿಡಿಕಾರಿದ್ದರು. ದೆಹಲಿಯ ಮತದಾರರು ಡಿಸೆಂಬರ್‌ 4 ರಂದು ನಡೆಯುವ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಯ 10 ವಿಡಿಯೊಗಳು ಅಥವಾ ಎಎಪಿಯ 10 ಭರವಸೆಗಳಲ್ಲಿ ಯಾವುದು ಬೇಕೋ ಆಯ್ಕೆ ಮಾಡಿಕೊಳ್ಳಬಹದು ಎಂದು ಹೇಳಿದ್ದರು.

ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಎಎಪಿಯು ನವೆಂಬರ್‌ ತಿಂಗಳ ಆರಂಭದಲ್ಲಿ ದೆಹಲಿ ನಿವಾಸಿಗಳಿಗೆ 10 ಆಶ್ವಾಸನೆಗಳನ್ನು ನೀಡಿದೆ.

ವಿಡಿಯೊ ನಿರ್ಮಾಣ ಕಂಪನಿ: ಕೇಜ್ರಿವಾಲ್‌
‘ಯಾರು ಶಾಲೆಗಳನ್ನು, ಆಸ್ಪತ್ರೆಗಳನ್ನು ಕಟ್ಟಿದ್ದಾರೊ ಅವರಿಗೆಈ ಬಾರಿಯ ದೆಹಲಿ ಮಹಾನಗರ ಪಾಲಿಕೆ ಅಧಿಕಾರವನ್ನು ಜನರು ನೀಡಲಿದ್ದಾರೆ’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಭಾನುವಾರ ಟ್ವೀಟ್‌ ಮಾಡಿದ್ದಾರೆ.

‘ಪತ್ರಿ ವಾರ್ಡ್‌ಗಳಲ್ಲೂ ವಿಡಿಯೊ ನಿರ್ಮಿಸುವ ಶಾಪ್‌ವೊಂದನ್ನು ತೆರೆಯುವ ಹೊಸ ಚುನಾವಣಾ ಭರವಸೆಯನ್ನು ಬಿಜೆಪಿಯು ದೆಹಲಿ ಜನರಿಗೆ ನೀಡುತ್ತಿದೆ. ಬಿಜೆಪಿಯು ವಿಡಿಯೊ ನಿರ್ಮಾಣ ಕಂಪನಿಯಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಜನರು ಅವರಿಗೆ ವಿಡಿಯೊ ನಿರ್ಮಿಸಲು ಉದ್ಯೋಗವನ್ನು ನೀಡಲಿದ್ದಾರೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT