ಶುಕ್ರವಾರ, ಜುಲೈ 1, 2022
21 °C

ಅಂಬಾನಿ ನಿವಾಸದ ಬಳಿ ಸ್ಫೋಟಕ ಸಂಗ್ರಹಿಸಿಟ್ಟಿದ್ದು ಸಚಿನ್ ವಾಜೆ: ಎನ್‌ಐಎ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಕಳೆದ ತಿಂಗಳು ಉದ್ಯಮಿ ಮುಕೇಶ್ ಅಂಬಾನಿ ಅವರ ನಿವಾಸದ ಬಳಿ ಎಸ್‌ಯುವಿ ಕಾರಿನಲ್ಲಿ ಪತ್ತೆಯಾದ ಜಿಲೆಟಿನ್ ಕಡ್ಡಿಗಳನ್ನು ಆ ಪ್ರಕರಣದಲ್ಲಿ ಆರೋಪಿಯಾಗಿ, ಅಮಾನತುಗೊಂಡ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರೇ ಸಂಗ್ರಹಿಸಿದ್ದರು ಎಂದು ಎನ್ಐಎ ಮೂಲಗಳು ತಿಳಿಸಿವೆ.

ಆದರೆ,‌ ಈ ಸ್ಪೋಟಕಗಳ ಮೂಲದ ಬಗ್ಗೆ ವಿವರ ನೀಡಲು ತನಿಖಾಧಿಕಾರಿಗಳು ನಿರಾಕರಿಸಿದ್ದಾರೆ.

ಓದಿ: ಸಚಿನ್ ವಾಜೆ ಬಂಧನ ಆಗಿದ್ದೇಕೆ! ಇಲ್ಲಿದೆ ಕಂಪ್ಲೀಟ್ ರಿಪೋರ್ಟ್

‘ಜಿಲೆಟಿನ್ ಕಡ್ಡಿಗಳನ್ನು ವಾಜೆಯೇ ಸಂಗ್ರಹಿಸಿದ್ದಾರೆ. ಎನ್‌ಐಎ ಸಂಗ್ರಹಿಸಿರುವ ಸಿಸಿಟಿವಿ ದೃಶ್ಯಾವಳಿಗಳಲ್ಲಿ, ಘಟನಾ ಸ್ಥಳದಲ್ಲಿ ವಾಜೆ ಇರುವುದನ್ನು ಸಾಕ್ಷ್ಯೀಕರಿಸುತ್ತಿವೆ‘ ಎಂದು ಮೂಲಗಳು ತಿಳಿಸಿವೆ.

ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಐಎ ತಂಡ, ಮುಂಬೈ ಪೊಲೀಸ್ ಕಮಿಷನರ್‌ ಕಚೇರಿ ಸುತ್ತಮುತ್ತಲಿಲನ ಪ್ರದೇಶದಲ್ಲಿರುವ ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸುತ್ತಿದೆ. ಈ ದೃಶ್ಯಗಳು ವಾಜೆ ಅವರ ಚಲನವಲನಗಳನ್ನು ಪತ್ತೆ ಮಾಡಲು ನೆರವಾಗುತ್ತವೆ ಎಂದು ಮೂಲಗಳು ತಿಳಿಸಿವೆ.

ಓದಿ: ಏಪ್ರಿಲ್‌ 3ರ ವರೆಗೂ ಎನ್‌ಐಎ ವಶದಲ್ಲಿ ಸಚಿನ್‌ ವಾಜೆ: ವಿಶೇಷ ಕೋರ್ಟ್‌

ಈ ನಡುವೆ ಪೊಲೀಸ್ ಕಮಿಷನರ್‌ ಕಚೇರಿ ಸುತ್ತಲಿನಲ್ಲಿರುವ ಕೆಲವು ಸಿಸಿಟಿವಿ ದೃಶ್ಯಗಳನ್ನು ಮತ್ತು ಡಿಜಿಟಲ್ ವಿಡಿಯೊ ರೆಕಾರ್ಡರ್‌ಗಳನ್ನು ನಾಶ ಮಾಡುವ ಪ್ರಯತ್ನಗಳು ನಡೆದಿವೆ. ಆದರೆ, ಮುಖ್ಯವಾದ ಹಲವು ದೃಶ್ಯಗಳನ್ನು ಸಂಗ್ರಹಿಸಿರುವುದಾಗಿ ಮೂಲಗಳು ತಿಳಿಸಿವೆ.

ಓದಿ: ಅಂಬಾನಿ ಮನೆ ಬಳಿ ಸ್ಫೋಟಕ ಪತ್ತೆ ಪ್ರಕರಣ: ಎನ್‌ಐಎ ಮುಂದೆ ಹಾಜರಾದ ಸಚಿನ್ ವಾಜೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು