ಮಮತಾ ಬ್ಯಾನರ್ಜಿಯದ್ದು ಪ್ರತಿಬಂಧಕ ಮನಸ್ಥಿತಿ: ನರೇಂದ್ರ ಮೋದಿ ಟೀಕೆ

ಹರಿಪಾಲ್/ಸೋನಾರ್‌ಪುರ: ಮಮತಾ ಬ್ಯಾನರ್ಜಿಯದ್ದು ಪ್ರತಿಬಂಧಕ ಮನಸ್ಥಿತಿ. ಉದ್ಯಮಿಗಳು ಮತ್ತು ಕೈಗಾರಿಕೋದ್ಯಮಿಗಳನ್ನು ಅವರು ಪಶ್ಚಿಮ ಬಂಗಾಳದಿಂದ ಓಡಿಸಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಟಾಟಾ ಮೋಟರ್ಸ್ ಸಿಂಗೂರ್‌ನಲ್ಲಿ ಆರಂಭಿಸಿದ್ದ ನ್ಯಾನೊ ಕಾರು ಘಟಕದ ವಿರುದ್ಧ ಟಿಎಂಸಿ ನಡೆಸಿದ್ದ ಹೋರಾಟದ ಬಗ್ಗೆ ಮೋದಿ ಅವರು ಇಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ. ‘ಟಿಎಂಸಿ ಅಂದರೆ ಟಾಕಾ ಮಾರ್ ಕಂಪನಿ (ಲೂಟಿಕೋರ ಕಂಪನಿ). ದೀದಿ ಅವರೇ, ಮೋದಿ ಇಲ್ಲಿದ್ದಾನೆ ನಿಮ್ಮ ಆಟ ನಡೆಯುವುದಿಲ್ಲ ಎಂದು ನಿಮ್ಮ ಪಕ್ಷದ ಗೂಂಡಾಗಳಿಗೆ ಹೇಳಿ ’ ಎಂದು ಮೋದಿ ಹೇಳಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.