ಭಾನುವಾರ, ಮೇ 29, 2022
30 °C

ಪಶ್ಚಿಮ ಬಂಗಾಳ: ಶಂಕಿತ ದನಗಳ್ಳ ಬಿಎಸ್‌ಎಫ್‌ ಗುಂಡಿಗೆ ಬಲಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ದಿನ್ಹತಾ/ಗುವಾಹಟಿ: ಪಶ್ಚಿಮ ಬಂಗಾಳದ ಕೂಚ್‌ಬೆಹಾರ್‌ ಜಿಲ್ಲೆಯಲ್ಲಿನ ಭಾರತ–ಬಾಂಗ್ಲಾದೇಶ ಗಡಿಯಲ್ಲಿ ಶಂಕಿತ ದನಗಳ್ಳನೊಬ್ಬ ಗಡಿ ಭದ್ರತಾ ದಳದ (ಬಿಎಸ್‌ಎಫ್‌) ಗುಂಡಿಗೆ ಬಲಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. 

ಮಧ್ಯರಾತ್ರಿ ಸುಮಾರು 2.30ರ ಸಮಾರಿಗೆ ದಿನ್ಹತಾ ನಗರದ ಗಿಟಾಲ್‌ದಾಹ್‌ ಬಡಿಯ ಹೊರ ಪ್ರದೇಶದಲ್ಲಿಯ ಕಾಶಿಮ್‌ಘಾಟ್‌ನಲ್ಲಿ ಶಂಕಿತ 15–20 ದನಗಳ್ಳರ ಗುಂಪೊಂದು ಸೈನಿಕರ ಬಂದೂಕುಗಳನ್ನು ಕದಿಯಲು ಯತ್ನಿಸಿದಾಗ  ಬಿಎಸ್‌ಎಫ್‌ ಯೋಧರು ಮೊದಲಿಗೆ 6 ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದರು. ಆದರೂ ದನಗಳ್ಳರು ಬಿಎಸ್‌ಎಫ್‌ ಮೇಲೆ ದಾಳಿಗೆ ಮುಂದಾದಾಗ ಸೈನಿಕರು ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ಹೇಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು