ಮಂಗಳವಾರ, ಏಪ್ರಿಲ್ 13, 2021
30 °C

ವಾಟ್ಸ್‌ಆ್ಯಪ್ ಸ್ಥಗಿತಗೊಂಡಾಗ ಗಾಬರಿ, ಬಂಗಾಳದಲ್ಲಿ ಅಭಿವೃದ್ಧಿಯೇ ಕುಂಠಿತ: ಮೋದಿ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ವಾಟ್ಸ್‌ಆ್ಯಪ್ 50 ನಿಮಿಷಗಳಷ್ಟು ಕಾಲ ಸ್ಥಗಿತಗೊಂಡಾಗ ಎಲ್ಲರು ಗಾಬರಿಗೊಂಡರು. ಆದರೆ ಕಳೆದ 50-55 ವರ್ಷಗಳಿಂದ ಬಂಗಾಳದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕೆ ಮಾಡಿದ್ದಾರೆ.

ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭಿಯಾನದಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ, ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಸೇರಿದಂತೆ ಹಿಂದಿನ ಎಡರಂಗ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: 

'ಖರ್ಗಾಪುರದಲ್ಲಿ ನಡೆದ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ನಿನ್ನೆ (ಶುಕ್ರವಾರ) ವ್ಯಾಟ್ಸ್‌ಆ್ಯಪ್, ಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್ 50-55 ನಿಮಿಷಗಳಷ್ಟು ಕಾಲ ಸ್ಥಗಿತಗೊಂಡಾಗ ಎಲ್ಲರೂ ಗಾಬರಿಗೊಳಗಾದರು. ಆದರೆ ಬಂಗಾಳದಲ್ಲಿ ಅಭಿವೃದ್ಧಿ ಹಾಗೂ ಕನಸುಗಳು ಕಳೆದ 50-55 ವರ್ಷಗಳಲ್ಲಿ ಕುಸಿಯುತ್ತಿವೆ. ಮೊದಲಿಗೆ ಕಾಂಗ್ರೆಸ್, ನಂತರ ಎಡರಂಗ ಮತ್ತು ಈಗ ಟಿಎಂಸಿ ರಾಜ್ಯದ ಅಭಿವೃದ್ಧಿಯನ್ನು ನಿಷ್ಕ್ರಿಯಗೊಳಿಸಿದೆ' ಎಂದು ಆರೋಪಿಸಿದರು.

 

 

 

'ಕಾಂಗ್ರೆಸ್ ಮತ್ತು ಎಡಪಂಥೀಯರ ವಿನಾಶವನ್ನು ನೀವು ನೋಡಿದ್ದೀರಿ. ಟಿಎಂಸಿ ನಿಮ್ಮ ಕನಸುಗಳನ್ನು ಹಾಳು ಮಾಡಿದೆ. ಕಳೆದ 70 ವರ್ಷಗಳಲ್ಲಿ ನೀವು ಎಲ್ಲರಿಗೂ ಅವಕಾಶ ನೀಡಿದ್ದೀರಿ. ಆದರೆ ನಮಗೊಂದು ಐದು ವರ್ಷಗಳ ಅವಕಾಶ ನೀಡಿ. ಬಂಗಾಳವನ್ನು 70 ವರ್ಷಗಳ ವಿನಾಶದಿಂದ ಮುಕ್ತಿಗೊಳಿಸಲಿದ್ದೇವೆ. ನಿಮಗಾಗಿ ನಮ್ಮ ಪ್ರಾಣವನ್ನೇ ತ್ಯಾಗ ಮಾಡುತ್ತೇವೆ' ಎಂದು ಭರವಸೆ ನೀಡಿದರು.

 

ಇಷ್ಟು ದೊಡ್ಡ ಸಂಖ್ಯೆಯಲ್ಲಿ ನೀವು ಬಿಜೆಪಿಯನ್ನು ಆಶೀರ್ವದಿಸಲು ಬಂದಿರುವುದು ನಮಗೆ ಸಿಕ್ಕ ಗೌರವ. ಇದು ಸ್ಪಷ್ಟ ಸಂಕೇತವಾಗಿದ್ದು, 'ಬಂಗಾಳ್ ಮೇ ಈಸ್ ಬಾರ್ ಬಿಜೆಪಿ ಸರ್ಕಾರ್' (ಬಂಗಾಳದಲ್ಲಿ ಈ ಬಾರಿ ಬಿಜೆಪಿ ಸರ್ಕಾರ) ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು