ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

44 ಲಕ್ಷ ಲಸಿಕೆ ಪೋಲು: ದೆಹಲಿ ಹೈಕೋರ್ಟ್‌ ಅತೃಪ್ತಿ

Last Updated 20 ಏಪ್ರಿಲ್ 2021, 18:33 IST
ಅಕ್ಷರ ಗಾತ್ರ

ನವದೆಹಲಿ: ಲಸಿಕೆಯು ಭಾರಿ ಪ್ರಮಾಣದಲ್ಲಿ ಪೋಲು ಆಗುತ್ತಿರುವ ಬಗ್ಗೆ ದೆಹಲಿ ಹೈಕೋರ್ಟ್‌ ಅಸಮಾಧಾನ ವ್ಯಕ್ತ ಪಡಿಸಿದೆ. ಪೋಲು ತಡೆಯಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.

ದಿನವೂ ಶೇ 6ರಷ್ಟು ಲಸಿಕೆ ಪೋಲಾಗುತ್ತಿದೆ. ಈವರೆಗೆ 10 ಕೋಟಿ ಜನರಿಗೆ ಲಸಿಕೆ ನೀಡ ಲಾಗಿದ್ದರೆ 44 ಲಕ್ಷ ಪೋಲಾಗಿದೆ. ತಮಿಳುನಾಡಿನಲ್ಲಿಯೇ ಹೆಚ್ಚು ಪೋಲಾಗಿದೆ ಎಂದು ವರದಿಗಳನ್ನು ಉಲ್ಲೇಖಿಸಿ ಕೋರ್ಟ್‌ ಹೇಳಿದೆ.

‘ಪೋಲಿನ ಪ್ರಮಾಣವು ಬಹಳ ಹೆಚ್ಚು. ಯಾರಿಗೆ ಲಸಿಕೆ ಹಾಕಿಸಲು ಸಾಧ್ಯವೋ ಅವರಿಗೆ ಹಾಕಿಸಿ. ವರ್ಷ 16 ಆಗಿರಲಿ, 60 ಆಗಿರಲಿ.ಸಾಂಕ್ರಾಮಿಕಕ್ಕೆ ವಯಸ್ಸಿನ ತಾರತಮ್ಯ ಇಲ್ಲ’ ಎಂದು ನ್ಯಾಯಮೂರ್ತಿಗಳಾದ ವಿಪಿನ್‌ ಸಂಘಿ ಮತ್ತು ರೇಖಾ ಪಲ್ಲಿ ಅವರ ಪೀಠವು ಹೇಳಿದೆ.

ತಮಿಳುನಾಡಿನಲ್ಲಿ ಅತಿ ಹೆಚ್ಚು ಅಂದರೆ ಶೇ 12ರಷ್ಟು ಲಸಿಕೆ ವ್ಯರ್ಥವಾಗಿದೆ. ಹರಿಯಾಣ (ಶೇ 9.74), ಪಂಜಾಬ್‌ (ಶೇ 8.12), ಮಣಿಪುರ (ಶೇ 7.8) ಮತ್ತು ತೆಲಂಗಾಣ (ಶೇ 7.55) ನಂತರದ ಸ್ಥಾನಗಳಲ್ಲಿವೆ ಎಂದು ಮಾಹಿತಿ ಹಕ್ಕು ಕಾಯ್ದೆ ಅಡಿ ಪಡೆದ ಮಾಹಿತಿ ಉಲ್ಲೇಖಿಸಿ ವರದಿ ಪ್ರಕಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT