ಸೋಮವಾರ, ಡಿಸೆಂಬರ್ 6, 2021
27 °C

ಭಾರತದ ಆರ್ಥಿಕತೆ ಚೇತರಿಕೆಗೆ ತಿಂಗಳುಗಳೇ ಬೇಕು: ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ

ನವದೆಹಲಿ: ಏಪ್ರಿಲ್‌–ಜೂನ್‌ ತ್ರೈಮಾಸಿಕದಲ್ಲಿ ಜಿಡಿಪಿ ಶೇ 23.9ರಷ್ಟು ಕುಸಿದಿರುವ ಅಂಕಿ–ಅಂಶಗಳು ಹೊರಬಿದ್ದಿರುವ ಬೆನ್ನಲ್ಲೇ, ಭಾರತದ ಆರ್ಥಿಕತೆಯು ಸಕಾರಾತ್ಮಕ ಬೆಳವಣಿಗೆಯನ್ನು ಕಂಡುಕೊಳ್ಳಲು ತಿಂಗಳುಗಳೇ ತೆಗೆದುಕೊಳ್ಳುತ್ತದೆ ಎಂದು ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಹೇಳಿದ್ದಾರೆ.

ವಿಡಿಯೊ ಕಾನ್ಫರೆನ್ಸ್ ಮೂಲಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ 12 ತಿಂಗಳಲ್ಲಿ ಜೂನ್ 30, 2019ರ ಹೊತ್ತಿಗೆ ಒಟ್ಟು ದೇಶೀಯ ಉತ್ಪಾದನೆಯ ಕಾಲು ಭಾಗವು ಕುಸಿತ ಕಂಡಿದೆ. ಇದನ್ನು ನೋಡುವ ಇನ್ನೊಂದು ವಿಧಾನವೆಂದರೆ, 2019-20ರ ಅಂತ್ಯದಿಂದ ಒಟ್ಟು ದೇಶೀಯ ಉತ್ಪಾದನೆಯು ಶೇ 20ರಷ್ಟು ಕುಸಿತ ಕಂಡಿದೆ ಎಂದರು.

ಉತ್ಪಾದನೆ, ನಿರ್ಮಾಣ ಕಾರ್ಯ, ವ್ಯಾಪಾರ, ಹೋಟೆಲ್‌ಗಳು ಮತ್ತು ಸಾರಿಗೆ ಸೇರಿದಂತೆ ಇತರ ವಲಯಗಳಲ್ಲಿ 'ತೀವ್ರ ಕುಸಿತ' ಕಂಡುಬಂದಿದ್ದರೂ ಕೂಡ ಕೃಷಿ, ಅರಣ್ಯ ಮತ್ತು ಮೀನುಗಾರಿಕೆ ಮಾತ್ರ ಈ ತ್ರೈಮಾಸಿಕದಲ್ಲಿ ಬೆಳವಣಿಗೆ ಕಂಡಿವೆ ಎಂದು ಅವರು ಹೇಳಿದ್ದಾರೆ.

ಈ ಅಂದಾಜುಗಳಿಂದಾಗಿ ನಮಗೇನು ಆಶ್ಚರ್ಯವಾಗುವುದಿಲ್ಲ. ಮೊದಲ ತ್ರೈಮಾಸಿಕದಲ್ಲಿ ಹಲವು ದಿನಗಳಲ್ಲಿ 'ಹಸಿರು ಚಿಗುರು'ಗಳನ್ನು ನೋಡುತ್ತಿದ್ದ ಸರ್ಕಾರಕ್ಕೆ ಅವು ಆಶ್ಚರ್ಯವನ್ನುಂಟು ಮಾಡಬೇಕು. ಸೂಕ್ತವಾದ ಹಣಕಾಸಿನ ಮತ್ತು ಕಲ್ಯಾಣ ಕ್ರಮಗಳನ್ನು ತೆಗೆದುಕೊಳ್ಳದ, ಆರ್ಥಿಕತೆಯ ಚೇತರಿಕೆಗೆ ಏನನ್ನೂ ಮಾಡದ ಸರ್ಕಾರಕ್ಕೆ ಇದು ಅವಮಾನಕರ ಸಂಗತಿಯಾಗಿರಬೇಕು ಎಂದಿದ್ದಾರೆ .

ಭಾರತೀಯ ಆರ್ಥಿಕತೆಯನ್ನು ಸೂಕ್ಷ್ಮವಾಗಿ ಗಮನಿಸಿದವರು, ಇತ್ತೀಚಿನ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ವಾರ್ಷಿಕ ವರದಿಯು ಈ ಸನ್ನಿವೇಶದ ಕುರಿತು ಮುನ್ಸೂಚನೆ ನೀಡಿದೆ. ಅದರ ಆಧಾರದ ಮೇಲೆ ಕಾಂಗ್ರೆಸ್ ಕೂಡ ಕುಸಿತವನ್ನು ತಡೆಗಟ್ಟುವ ಮತ್ತು ಪೂರ್ವಭಾವಿಯಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದೆ. ಆದರೆ ಸರ್ಕಾರ ಮಾತ್ರ ನಮ್ಮ ಮನವಿಗೆ ಕಿಡಿಗೊಡಲಿಲ್ಲ ಎಂದು ದೂರಿದ್ದಾರೆ.

ಆರ್ಥಿಕತೆಯು ತನ್ನ ದಿಕ್ಕನ್ನು ಬದಲಿಸಲು ಮತ್ತು ಸಕಾರಾತ್ಮಕ ಬೆಳವಣಿಗೆಯನ್ನು ಕಾಣಲು ಹಲವು ತಿಂಗಳುಗಳನ್ನೇ ತೆಗೆದುಕೊಳ್ಳುತ್ತದೆ. ಸರ್ಕಾರದ ನಿಷ್ಕ್ರಿಯತೆ ಮತ್ತು ಅಸಮರ್ಥತೆಯಿಂದಾಗಿ ಸುರಂಗದ ಕೊನೆಯ ಯಾವುದೇ ಸಮಯದಲ್ಲಾದರೂ ನಾವು ಬೆಳಕನ್ನು ನೋಡುತ್ತೇವೆ ಎಂಬ ಭರವಸೆಯನ್ನು ನೀಡುವುದಿಲ್ಲ ಎಂದರು.

2020ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಜಿಡಿಪಿಯ ತಾತ್ಕಾಲಿಕ ಅಂದಾಜುಗಳನ್ನು ಸೋಮವಾರ ಬಿಡುಗಡೆ ಮಾಡಲಾಗಿದೆ. ಏಪ್ರಿಲ್‌–ಜೂನ್‌ ಅವಧಿಯಲ್ಲಿ ಭಾರತದ ಜಿಡಿಪಿ ಶೇ 23.9ರಷ್ಟು ಕುಸಿತ ಕಂಡಿದೆ. 40 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಗ್ರಾಹಕ ಬೇಡಿಕೆ ಮತ್ತು ಖಾಸಗಿ ಹೂಡಿಕೆಯಲ್ಲಿ ಕುಸಿತ ಕಂಡುಬಂದಿರುವುದನ್ನು ಸರ್ಕಾರದ ಅಂಕಿ ಅಂಶಗಳು ತೋರಿಸುತ್ತವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು