ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2.5 ಕೋಟಿ ಡೋಸ್ ಲಸಿಕೆ ವಿತರಣೆ: ಮೋದಿ ನಿತ್ಯವೂ ಹುಟ್ಟುಹಬ್ಬ ಆಚರಿಸಲಿ– ಕಾಂಗ್ರೆಸ್

Last Updated 18 ಸೆಪ್ಟೆಂಬರ್ 2021, 10:13 IST
ಅಕ್ಷರ ಗಾತ್ರ

ನವದೆಹಲಿ: ನಿನ್ನೆ ಪ್ರಧಾನಿ ಮೋದಿ ಹುಟ್ಟುಹಬ್ಬದಂದು ಬಿಜೆಪಿ ಆಡಳಿತವಿರುವ ಕೆಲವು ರಾಜ್ಯಗಳು ದಿನದಲ್ಲಿ ದಾಖಲೆಯ ಲಸಿಕೆ ನೀಡುವ ಮೂಲತ ಉತ್ತಮ 'ಪ್ರದರ್ಶನ' ನೀಡಿರುವಂತೆ ಪ್ರಧಾನಿ ನರೇಂದ್ರ ಮೋದಿ ಪ್ರತಿ ದಿನವೂ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಬೇಕು ಮತ್ತು ದೈನಂದಿನ ಸರಾಸರಿಗಿಂತ ಹಲವು ಪಟ್ಟು ಹೆಚ್ಚು ಲಸಿಕೆ ಹಾಕಬೇಕು ಎಂದು ಕಾಂಗ್ರೆಸ್ ಹೇಳಿದೆ‌.

ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದಂದು ದೇಶದಾದ್ಯಂತ ಶುಕ್ರವಾರ ಒಂದೇ ದಿನ 2.5 ಕೋಟಿ ಡೋಸ್ ಕೋವಿಡ್ ಲಸಿಕೆ ನೀಡುವ ಮೂಲಕ ದಾಖಲೆ ನಿರ್ಮಿಸಿದೆ. ಇದರ ಬೆನ್ನಲ್ಲೇ ಕಾಂಗ್ರಸ್ ಪಕ್ಷವು ಮೋದಿಯನ್ನು ತರಾಟೆಗೆ ತೆಗೆದುಕೊಂಡಿದೆ.

ಇದು ದೇಶಕ್ಕೆ ಅಗತ್ಯವಿರುವ ಲಸಿಕೆಯ ವೇಗ ಎಂದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ದಿನವೊಂದಕ್ಕೆ '2.1 ಕೋಟಿ ಲಸಿಕೆಗಳನ್ನು ಇನ್ನೂ ಹಲವು ದಿನಗಳವರೆಗೆ ಎದುರು ನೋಡುತ್ತಿದ್ದೇವೆ. ಈ ವೇಗ ನಮ್ಮ ದೇಶಕ್ಕೆ ಬೇಕಾಗಿದೆ' ಎಂದು ಅವರು ಟ್ವೀಟ್ ಮಾಡಿದ್ದಾರೆ.

ಪಕ್ಷದ ನಾಯಕ ಪಿ.ಚಿದಂಬರಂ ಮಾತನಾಡಿ, 'ಶುಕ್ರವಾರ 2.5 ಕೋಟಿ ಲಸಿಕೆಗಳನ್ನು ನೀಡಿದ್ದಕ್ಕೆ ಸಂತೋಷ ಮತ್ತು ಕೃತಜ್ಞರಾಗಿದ್ದೇವೆ. 'ಆದರೆ ಈ ದಾಖಲೆ ನಿರ್ಮಿಸಲು ನಾವೇಕೆ ಪ್ರಧಾನಿಯವರ ಜನ್ಮದಿನದವರೆಗೆ ಏಕೆ ಕಾಯಬೇಕಾಯಿತು' ಎಂದು ಅವರು ಪ್ರಶ್ನಿಸಿದ್ದಾರೆ.

ಒಂದು ವೇಳೆ ಡಿಸೆಂಬರ್ 31 ರಂದು ಪ್ರಧಾನಿಯವರ ಜನ್ಮದಿನ ಎಂದು ಭಾವಿಸೋಣ, ಆಗ 2.5 ಕೋಟಿ ಲಸಿಕೆ ಡೋಸ್‌ಗಳನ್ನು ವರ್ಷದ ಕೊನೆಯ ದಿನದಂದು ಮಾತ್ರ ಹಾಕಬಹುದೇ. 'ವ್ಯಾಕ್ಸಿನೇಷನ್ ಎನ್ನುವುದು ಹುಟ್ಟುಹಬ್ಬದಂದು ಕೇಕ್ ಕತ್ತರಿಸಿದಂತೆ ಅಲ್ಲ. ವ್ಯಾಕ್ಸಿನೇಷನ್ ಒಂದು ಯೋಜನೆ, ಇದೊಂದು ಪ್ರಕ್ರಿಯೆ. ಇದನ್ನು ಪ್ರತಿ ದಿನವೂ ವೇಗಗೊಳಿಸಬೇಕು, ಹುಟ್ಟುಹಬ್ಬದಂದು ಮಾತ್ರ ಗರಿಷ್ಠ ಮಟ್ಟಕ್ಕೆ ಏರಿಸಬಾರದು' ಎಂದು ಅವರು ಟ್ವಿಟರ್‌ನಲ್ಲಿ ಹೇಳಿದ್ದಾರೆ.

ಬಿಜೆಪಿ ಆಡಳಿತವಿರುವ ರಾಜ್ಯಗಳಾದ ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್ ಮತ್ತು ಕರ್ನಾಟಕವು ಪ್ರಧಾನಿ ಮೋದಿಯವರ ಜನ್ಮದಿನದಂದು ಮಾತ್ರ ಉತ್ತಮ 'ಪ್ರದರ್ಶನ' ತೋರುವ ಮೂಲಕ ದೈನಂದಿನ ಸರಾಸರಿಗಿಂತಲೂ ಹೆಚ್ಚಿನ ಲಸಿಕೆ ಡೋಸ್‌ ನೀಡಿವೆ. ಆದರೆ ಇತರ ದಿನಗಳಲ್ಲಿ ಅವು 'ನಿಷ್ಕ್ರಿಯ' ರಾಜ್ಯಗಳಾಗಿವೆ. ಹೀಗಾಗಿ 'ಪ್ರಧಾನಿಯವರು ಪ್ರತಿದಿನವೂ ಅವರ ಜನ್ಮದಿನವನ್ನು ಆಚರಿಸಬೇಕೆಂದು ನಾನು ಬಯಸುತ್ತೇನೆ' ಎಂದು ಕೇಂದ್ರದ ಮಾಜಿ ಹಣಕಾಸು ಸಚಿವರು ಹೇಳಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ, ವಯಸ್ಕ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನರು ಅದರ ಮೊದಲ ಡೋಸ್ ಅನ್ನು ಇನ್ನೂ ಪಡೆಯಬೇಕಾಗಿದೆ ಮತ್ತು ಕೇವಲ 21 ಪ್ರತಿಶತದಷ್ಟು ಜನರಿಗೆ ಮಾತ್ರವೇ ಸಂಪೂರ್ಣ ಲಸಿಕೆಯನ್ನು ನೀಡಲಾಗಿದೆ' ಎಂದಿದ್ದಾರೆ.

‘ಲಸಿಕೆ ತೆಗೆದುಕೊಂಡಾಗ ಜ್ವರ ಬರುತ್ತದೆ. ಅದು ಲಸಿಕೆಯ ಅಡ್ಡಪರಿಣಾಮ‘ ಎಂದು ಜನರು ಮಾತನಾಡಿಕೊಳ್ಳುತ್ತಾರೆ. ಆದರೆ, ನನ್ನ ಜನ್ಮದಿನದಂದು ದೇಶದಾದ್ಯಂತ 2.5 ಕೋಟಿ ಲಸಿಕೆಗಳನ್ನು ನೀಡಿದ್ದನ್ನು ನೋಡಿ ರಾಜಕೀಯ ಪಕ್ಷವೊಂದಕ್ಕೆ ಜ್ವರ ಬಂದುಬಿಟ್ಟಿದೆ‘ ಎಂದು ಯಾವುದೇ ಪಕ್ಷದ ಹೆಸರು ಉಲ್ಲೇಖಿಸಿದೇ ಮೋದಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT