ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌: ಜವಾಹರ ಸ್ಪೋರ್ಟ್ಸ್‌ ಕ್ಲಬ್‌ಗೆ ಪ್ರಶಸ್ತಿ

Last Updated 28 ಜೂನ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಜವಾಹರ ಸ್ಪೋರ್ಟ್ಸ್‌ ಕ್ಲಬ್‌ (1) ತಂಡದವರು ಕೆಎಸ್‌ಸಿಎ ಆಶ್ರಯದಲ್ಲಿ ಎಂ.ಎ.ಟಿ. ಆಚಾರ್ಯ ಶೀಲ್ಡ್‌ಗಾಗಿ ನಡೆದ ಗುಂಪು–1, ಡಿವಿಷನ್ 2ರ ಲೀಗ್‌ ಕ್ರಿಕೆಟ್‌ ಟೂರ್ನಿಯಲ್ಲಿ ಪ್ರಶಸ್ತಿ ಎತ್ತಿಹಿಡಿದಿದ್ದಾರೆ. ತನ್ನ ಅಂತಿಮ ಲೀಗ್‌ ಪಂದ್ಯದಲ್ಲಿ ಜವಾಹರ ಸ್ಪೋರ್ಟ್ಸ್‌ ತಂಡ ವಿಜಯ ಕ್ರಿಕೆಟ್‌ ಕ್ಲಬ್‌ ವಿರುದ್ಧ ಡ್ರಾ ಮಾಡಿಕೊಂಡಿತು.

ಈ ಮೂಲಕ ಒಟ್ಟು ಪಾಯಿಂಟ್ಸ್‌ ಅನ್ನು 33ಕ್ಕೆ ಹೆಚ್ಚಿಸಿಕೊಂಡ ತಂಡ  ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿ ಟ್ರೋಫಿ ತನ್ನದಾಗಿಸಿಕೊಂಡಿತು.  ತಾನಾ ಡಿದ 11 ಪಂದ್ಯಗಳಿಂದ 28 ಪಾಯಿಂಟ್ಸ್‌ ಗಳಿಸಿದ ಸರ್‌ ಸೈಯದ್‌ ಕ್ರಿಕೆಟರ್ಸ್‌ ತಂಡ  ಎರಡನೇ ಸ್ಥಾನ ತನ್ನದಾಗಿಸಿಕೊಂಡಿತು.

ಸಂಕ್ಷಿಪ್ತ ಸ್ಕೋರ್‌: ಜವಾಹರ ಕ್ಲಬ್‌ (1):  76.3 ಓವರ್‌ಗಳಲ್ಲಿ 318 (ಕೆ.ಸಿ. ಅವಿನಾಶ್‌ 115, ಶಶೀಂದ್ರ 82; ಅದೋಕ್ಷ 117ಕ್ಕೆ4). ವಿಜಯ ಕ್ಲಬ್‌:  28 ಓವರ್‌ಗಳಲ್ಲಿ 5 ವಿಕೆಟ್‌ಗೆ 98 (ಕೆ.ಎಸ್‌. ದೇವಯ್ಯ 26ಕ್ಕೆ3). ಫಲಿತಾಂಶ:  ಡ್ರಾ.

ಚಿಂತಾಮಣಿ ಸಂಸ್ಥೆ, ಚಿಂತಾಮಣಿ: 55.1 ಓವರ್‌ಗಳಲ್ಲಿ 150 (ರಘುವೀರ್‌ 61ಕ್ಕೆ6). ಮತ್ತು 23.4 ಓವರ್‌ಗಳಲ್ಲಿ 98 (ರಘುವೀರ್‌ 50ಕ್ಕೆ7). ರಾಜಾಜಿನಗರ ಕ್ರಿಕೆಟರ್ಸ್‌: 62.2 ಓವರ್‌ಗಳಲ್ಲಿ 234 (ಸೂರಜ್‌ ಸಂಪತ್‌ 114, ನವೀನ್‌ 71) ಮತ್ತು 1.3 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 17. ಫಲಿತಾಂಶ: ರಾಜಾಜಿನಗರ ಕ್ರಿಕೆಟರ್ಸ್‌ಗೆ 10 ವಿಕೆಟ್‌ ಗೆಲುವು.

ಬೆಂಗಳೂರು ಕ್ರೀಡಾ ಕ್ಲಬ್‌:  45.3 ಓವರ್‌ಗಳಲ್ಲಿ 186 (ಕೆ.ಎಂ. ವದ್ವಾನಿ 64ಕ್ಕೆ5) ಮತ್ತು 29 ಓವರ್‌ಗಳಲ್ಲಿ 63 (ಕೆ.ಎಂ. ವದ್ವಾನಿ 21ಕ್ಕೆ6, ಎಸ್‌. ಸೂರಜ್‌ 16ಕ್ಕೆ4). ಸರ್‌ ಸೈಯದ್‌ ಕ್ರಿಕೆಟರ್ಸ್‌:  67.2 ಓವರ್‌ಗಳಲ್ಲಿ 278 (ಶ್ರೀಕರ 127; ವಿಶ್ವನಾಥ್‌ 64ಕ್ಕೆ5). ಫಲಿತಾಂಶ: ಸರ್‌ ಸೈಯದ್‌ ಕ್ರಿಕೆಟರ್ಸ್‌ಗೆ ಇನಿಂಗ್ಸ್‌ ಮತ್ತು 29ರನ್‌ ಗೆಲುವು.

ಮಾಡರ್ನ್‌ ಕ್ಲಬ್‌: 60 ಓವರ್‌ಗಳಲ್ಲಿ 7 ವಿಕೆಟ್‌ಗೆ 410 ಡಿಕ್ಲೇರ್ಡ್‌ (ಕುಲದೀಪ್‌ ಕುಮಾರ್‌ 158, ರಾಜೂ ಭಟ್ಕಳ್‌ 107; ಎಸ್‌. ಅಮೋಘ್‌ 94ಕ್ಕೆ4). ಜವಾಹರ ಸ್ಪೋರ್ಟ್ಸ್‌ ಕ್ಲಬ್‌ (2): 80.3 ಓವರ್‌ಗಳಲ್ಲಿ 238 (ಅಕ್ಷಯ್‌ 73; ಚೇತನ್‌ 103ಕ್ಕೆ6, ಮಹಮ್ಮದ್‌ ನಾಸೀರುದ್ದೀನ್‌ 73ಕ್ಕೆ4). ಮತ್ತು 36 ಓವರ್‌ಗಳಲ್ಲಿ 130 (ಚೇತನ್‌ 57ಕ್ಕೆ4). ಫಲಿತಾಂಶ: ಮಾಡರ್ನ್‌ ಕ್ಲಬ್‌ಗೆ ಇನಿಂಗ್ಸ್‌ ಮತ್ತು 42ರನ್‌ ಗೆಲುವು.

ಜುಪಿಟರ್‌ ಕ್ರಿಕೆಟರ್ಸ್‌: 59.3 ಓವರ್‌ಗಳಲ್ಲಿ 244 ಮತ್ತು 29 ಓವರ್‌ಗಳಲ್ಲಿ 6 ವಿಕೆಟ್‌ಗೆ 161 ಡಿಕ್ಲೇರ್ಡ್, ಮಲ್ಲೇಶ್ವರಂ ಜಿಮ್ಖಾನ: 64 ಓವರ್‌ಗಳಲ್ಲಿ 209  ಮತ್ತು 45 ಓವರ್‌ಗಳಲ್ಲಿ 3 ವಿಕೆಟ್‌ಗೆ 166. ಫಲಿತಾಂಶ: ಡ್ರಾ.

ಜಯನಗರ ಕೋಲ್ಟ್ಸ್‌: 37.3 ಓವರ್‌ಗಳಲ್ಲಿ 161 (ಎಸ್‌.ಪಿ. ಅರ್ಜುನ್‌ 53; ಎಚ್‌. ಶಿವರಾಜ್‌ 31ಕ್ಕೆ3). ಮತ್ತು 52 ಓವರ್‌ಗಳಲ್ಲಿ 9 ವಿಕೆಟ್‌ಗೆ 214 ಡಿಕ್ಲೇರ್ಡ್‌ (ಬಿ. ಧನುಷ್‌ 92; ಬಿ.ಆರ್‌. ಯತೀಶ್‌ ಕುಮಾರ್‌ 42ಕ್ಕೆ4).

ದೂರವಾಣಿ ಕ್ರಿಕೆಟರ್ಸ್‌ (1): 56.3 ಓವರ್‌ಗಳಲ್ಲಿ 189 (ಇಂದ್ರಸೇನ್‌ ಟಿ ದಾನಿ 65ಕ್ಕೆ4). ಮತ್ತು 35.2 ಓವರ್‌ಗಳಲ್ಲಿ 2 ವಿಕೆಟ್‌ಗೆ 187 (ಸುದಾಂಶು ಸೊಂಕಾರ್‌ ಔಟಾಗದೆ 101). ಫಲಿತಾಂಶ: ದೂರವಾಣಿ ಕ್ರಿಕೆಟರ್ಸ್‌ಗೆ 8 ವಿಕೆಟ್‌ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT