ಸೋಮವಾರ, ಮಾರ್ಚ್ 27, 2023
22 °C

ಸಾರಿಗೆ ನೌಕರರಿಗೆ ಶೇ 15ರಷ್ಟು ವೇತನ ಹೆಚ್ಚಳ: ಸಚಿವ ಶ್ರೀರಾಮುಲು ಹೇಳಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌  Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಾರಿಗೆ ಇಲಾಖೆ ಸಿಬ್ಬಂದಿ ವೇತನ ಪರಿಷ್ಕರಣೆ ಸಂಬಂಧ ಗುರುವಾರ ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದ್ದು, ಶೇ.15 ರಷ್ಟು ವೇತನ ಹೆಚ್ಚಳ ಮಾಡೋಕೆ ನಿರ್ಧಾರ ಮಾಡಲಾಗಿದೆ ಎಂದು ಸಾರಿಗೆ ಸಚಿವ ಬಿ ಶ್ರೀರಾಮುಲು ತಿಳಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಕಳೆದ 27 ವರ್ಷಗಳಲ್ಲಿ ಅತ್ಯಧಿಕ ವೇತನ ಪರಿಷ್ಕರಣೆಯನ್ನು ನಮ್ಮ ಸರ್ಕಾರ ಈಗ ಮಾಡಿದೆ ಎಂದು ಹೇಳಿದ್ದಾರೆ.

ಈ ನಿರ್ಧಾರದಿಂದ ರಾಜ್ಯದ ಎಲ್ಲ ನಾಲ್ಕು ರಸ್ತೆ ಸಾರಿಗೆ ನಿಗಮಗಳಿಗೆ ಅಂದಾಜು ₹550 ಕೋಟಿ ಹೆಚ್ಚುವರಿ ವೆಚ್ಚವಾಗಲಿದೆ ಎಂದು ತಿಳಿಸಿದ್ದಾರೆ.

ಇದು ನಮ್ಮ ಸಿಬ್ಬಂದಿಗೆ ಶುಭ ಸುದ್ದಿ ಆಗಿದ್ದು, ಸದಾ ಉತ್ತಮ ಜನಸೇವೆಗೆ ಹೆಸರು ಮಾಡಿರೋ ನಮ್ಮ ಸಿಬ್ಬಂದಿ, ತಾವು ನೀಡಿರುವ ಬಂದ್ ಕರೆ ಹಿಂಪಡೆದು ಎಂದಿನಂತೆ ಉತ್ತಮ ಸೇವೆಗಳನ್ನು ಯಾವುದೇ ವ್ಯತ್ಯಯ ಆಗದಂತೆ ಮುಂದುವರಿಸಲಿದ್ದಾರೆ ಎಂಬ ನಂಬಿಕೆ ಇದೆ ಎಂದು ರಾಮುಲು ತಿಳಿಸಿದ್ದಾರೆ.

ಶೇ 20 ರಷ್ಟು ವೇತನ ಹೆಚ್ಚಳಕ್ಕೆ ಪಟ್ಟು ಹಿಡಿದಿರುವ ಸಾರಿಗೆ ನಿಗಮಗಳ ನೌಕರರು ಇದೇ ಮಾರ್ಚ್ 24 ರಂದು ರಾಜ್ಯದಾದ್ಯಂತ ಮುಷ್ಕರಕ್ಕೆ ಕರೆ ನೀಡಿದ್ದರು. ರಾಜ್ಯ ಸರ್ಕಾರ ಶೇ 14 ರಷ್ಟು ಮಾಡಬಹುದು ಎನ್ನಲಾಗಿತ್ತು. ಆದರೆ, ಇದೀಗ ಶೇ 15 ರಷ್ಟು ವೇತನ ಹೆಚ್ಚಳ ಮಾಡಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು