ಶನಿವಾರ, ಸೆಪ್ಟೆಂಬರ್ 24, 2022
21 °C

ಏಳು ಕೆಎಸ್‌ಪಿಎಸ್‌ ಅಧಿಕಾರಿಗಳಿಗೆ ಐಪಿಎಸ್‌ಗೆ ಬಡ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್‌ ಸೇವೆಯ (ಕೆಎಸ್‌ಪಿಎಸ್‌) ಏಳು ಅಧಿಕಾರಿಗಳಿಗೆ ಭಾರತೀಯ ಪೊಲೀಸ್‌ ಸೇವೆಗೆ (ಐಪಿಎಸ್‌) ಬಡ್ತಿ ನೀಡಲಾಗಿದೆ.

ಸಚಿನ್ ಘೋರ್ಪಡೆ, ಅಮಟೆ ವಿಕ್ರಂ, ಸಜಿತ್‌ ವಿ. ಜೆ, ರಾಮ್‌ ಲಕ್ಷ್ಮಣಸಾ ಅರಸಿದ್ದಿ, ಬಾಬಾಸಾಬ್‌ ನೇಮಗೌಡ, ಗೋಪಾಲ್‌ ಬಿ. ಬ್ಯಾಕೋಡ, ಮಹಾನಿಂಗ ನಂದಗಾನ್ವಿ ಬಡ್ತಿ ಪಡೆದವರು.

2021ನೇ ಸಾಲಿನ ಆಯ್ಕೆ ಪಟ್ಟಿಯಲ್ಲಿ ಬಡ್ತಿ ನೀಡಲು ಜುಲೈ 25ರಂದು ಆಯ್ಕೆ ಸಮಿತಿ ಸಭೆ ನಡೆದಿತ್ತು. ಇದೀಗ ಕೇಂದ್ರ ಲೋಕಸೇವಾ ಆಯೋಗ ಈ ಎಲ್ಲ ಅಧಿಕಾರಿಗಳಿಗೆ ಐಪಿಎಸ್‌ ಶ್ರೇಣಿಗೆ ಬಡ್ತಿ ನೀಡಿ ಅಧಿಸೂಚನೆ ಹೊರಡಿಸಿದೆ. ಈ ಅಧಿಕಾರಿಗಳು ಕರ್ನಾಟಕ ರಾಜ್ಯ ಕೇಡರ್‌ನಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.