ಉಡುಪಿ: ಗುತ್ತಿಗೆದಾರ ಸಂತೋಷ್ ಪಾಟೀಲ ಆತ್ಮಹತ್ಯೆ ಮಾಡಿಕೊಂಡಿದ್ದ ಲಾಡ್ಜ್ನಲ್ಲಿ ಮಂಗಳವಾರ ಮತ್ತೊಬ್ಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಂಗಳೂರಿನ ಕೊಣಾಜೆಯ ಶರಣ್ ರಾಜ್ ಎಂಬುವರು ಕೊಠಡಿಯಲ್ಲಿ ನೇಣುಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಮಾಜಿ ಸಚಿವ ಈಶ್ವರಪ್ಪ ವಿರುದ್ಧ ‘ಶೇ 40 ಪರ್ಸೆಂಟೆಜ್’ ಆರೋಪ ಮಾಡಿ ಬೆಳಗಾವಿಯಿಂದ ಉಡುಪಿಗೆ ಬಂದಿದ್ದ ಸಂತೋಷ್ ಪಾಟೀಲ ಏ.12ರಂದು ಲಾಡ್ಜ್ನಲ್ಲಿ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಈ ಘಟನೆ ರಾಜ್ಯದಾದ್ಯಂತ ಸುದ್ದಿಯಾಗುವುದರ ಜತೆಗೆ, ಲಾಡ್ಜ್ನ ಹೆಸರೂ ಎಲ್ಲಾ ಕಡೆ ಕೇಳಿಬಂದಿತ್ತು. ಇದರಿಂದ ವ್ಯಾಪಾರಕ್ಕೆ ತೊಂದರೆಯಾಗುವುದೆಂಬ ಕಾರಣದಿಂದ ಮಾಲೀಕರು ಲಾಡ್ಜ್ನ ಹೆಸರು ಬದಲಿಸಿದ್ದರು. ಮಾತ್ರವಲ್ಲದೆ, ಜ್ಯೋತಿಷಿಗಳ ಸಲಹೆಯಂತೆ ಹೋಮ ಹವನಾದಿಗಳನ್ನೂ ನೆರವೇರಿಸಿದ್ದರು. ಇದೆಲ್ಲ ಮುಗಿದು ಕಲವೇ ದಿನಗಳಲ್ಲಿ ಲಾಡ್ಜ್ನಲ್ಲಿ ಮತ್ತೊಬ್ಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.