ಸೋಮವಾರ, ಮೇ 10, 2021
21 °C

ಜಿಂದಾಲ್‌ಗೆ ಭೂಮಿ ಮಾರಾಟ: ನಿರ್ಧಾರ ವಾಪಸು ಪಡೆಯುವಂತೆ ಸಿಎಂಗೆ ಆನಂದ್‌ಸಿಂಗ್ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಳ್ಳಾರಿ: ‘ಭೂಮಿ ಮಾರಾಟ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಈಗಾಗಲೇ ಚರ್ಚಿಸಿರುವೆ. ಈಗಲೂ ಭೂಮಿ ಮಾರಾಟ ನಿರ್ಧಾರವನ್ನು ವಾಪಸ್‌ ಪಡೆಯುವಂತೆ ಅವರಿಗೆ ಮನವಿ ಮಾಡುವೆ’ ಎಂದು ಸಚಿವ ಆನಂದ್‌ಸಿಂಗ್‌ ಹೇಳಿದರು.

‘ಜಿಂದಾಲ್‌ ವಿಷಯದಲ್ಲಿ ಕಾಂಗ್ರೆಸ್‌ ಪ್ರಚೋದನಕಾರಿ ಸವಾಲನ್ನು ಒಡ್ಡುತ್ತಿದೆ. ಅಂದು ವಿರೋಧಿಸಿದ್ದಂತೆಯೇ ಇಂದೂ ಭೂಮಿ ಮಾರಾಟವನ್ನು ವಿರೋಧಿಸುವೆ. ಭೂಮಿಯನ್ನು ಗುತ್ತಿಗೆಗಷ್ಟೇ ನೀಡಬೇಕು ಎಂಬ ಪ್ರತಿಪಾದನೆಗೆ ಈಗಲೂ ಬದ್ಧ’ ಎಂದು ಶನಿವಾರ ಹೇಳಿದರು.

‘ಭೂಮಿ ಮಾರಾಟದ ಪ್ರಸ್ತಾವವನ್ನು ಜಿಂದಾಲ್‌ ಸಲ್ಲಿಸಿದಾಗ ರಾಜ್ಯ ಸರ್ಕಾರ ತಾಂತ್ರಿಕ ಸಮಸ್ಯೆಗಳನ್ನು ಪರಿಶೀಲಿಸಬೇಕಾಗಿತ್ತು. ಆದರೆ ಮನುಷ್ಯ ಸಹಜವಾಗಿ ಈಗಾಗಲೇ ತಪ್ಪಾಗಿದೆ. ಭೂಮಿ ಮಾರಾಟ ಮಾಡುವ ಬದಲು, ಕಾರ್ಖಾನೆ ಕಾರ್ಯನಿರ್ವಹಿಸುವವರೆಗೂ ಭೂಮಿಯನ್ನು ವಾಪಸ್‌ ಪಡೆಯುವುದಿಲ್ಲ ಎಂಬ ಒಪ್ಪಂದ ಏರ್ಪಡಿಸಿಕೊಳ್ಳಬೇಕು’ ಎಂದು ಪ್ರತಿಪಾದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು