ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಣಮಟ್ಟದ ಶಿಕ್ಷಣದ ಪಣ: ಶಿಕ್ಷಣ ಪ್ರತಿಷ್ಠಾನ ಸ್ಥಾಪಿಸಿದ ಸುರೇಶ ಅಂಗಡಿ

Last Updated 23 ಸೆಪ್ಟೆಂಬರ್ 2020, 15:53 IST
ಅಕ್ಷರ ಗಾತ್ರ

ಬೆಳಗಾವಿ: ಎಲ್ಲ ಪ್ರದೇಶದ ಮತ್ತು ವರ್ಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸುರೇಶ ಅಂಗಡಿ ಶಿಕ್ಷಣ ಪ್ರತಿಷ್ಠಾನವನ್ನು (ಎಸ್ಎಇಎಫ್) ಸ್ಥಾಪಿಸಿದ್ದರು. ಪ್ರತಿಷ್ಠಾನವು, ಆಯಾ ಕ್ಷೇತ್ರಗಳಲ್ಲಿನ ಇತ್ತೀಚಿನ ಪ್ರವೃತ್ತಿಗಳ ಬಗ್ಗೆ ವಿದ್ಯಾರ್ಥಿಗಳಿಗೆ ಪರಿಚಯಿಸಲು ಅತ್ಯಾಧುನಿಕ ಮೂಲಸೌಕರ್ಯಗಳನ್ನು ಹೊಸ ತಂತ್ರಜ್ಞಾನದೊಂದಿಗೆ ಒದಗಿಸುತ್ತದೆ.

ಪ್ರತಿಷ್ಠಾನದಿಂದ 4 ಸಂಸ್ಥೆಗಳನ್ನು ನಡೆಸಲಾಗುತ್ತಿದೆ. ಅಂಗಡಿ ಇನ್‌ಸ್ಟಿಟ್ಯೂಟ್‌ ಆಫ್‌ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್‌ (ಎಐಟಿಎಂ), ಅಂಗಡಿ ಸ್ಕೂಲ್ ಆಫ್ ಆರ್ಕಿಟೆಕ್ಚರ್ (ಎಎಸ್ಎ), ಅಂಗಡಿ ಕಾಲೇಜ್ ಆಫ್ ಕಾಮರ್ಸ್‌ ಅಂಡ್ ಸೈನ್ಸ್‌ (ಎಸಿಸಿಎಸ್) ಹಾಗೂ ಅಂಗಡಿ ಇಂಟರ್‌ನ್ಯಾಷನಲ್ ಸ್ಕೂಲ್ (ಎಐಎಸ್). ನರ್ಸರಿಯಿಂದ ಪಿಎಚ್‌ಡಿವರೆಗೆ ಕಲಿಯಲು ಸೌಕರ್ಯವಿದ್ದು, ಪ್ರಸ್ತುತ 3ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 350ಕ್ಕೂ ಹೆಚ್ಚು ಶಿಕ್ಷಕರಿದ್ದಾರೆ. ಕೆಲವೇ ವರ್ಷಗಳಲ್ಲಿ (2009ರಲ್ಲಿ ಪ್ರಾರಂಭ) ಅಭೂತಪೂರ್ವ ಸಾಧನೆ ಮಾಡಿ ಶಿಕ್ಷಣ ಕ್ಷೇತ್ರದ ನಕ್ಷೆಯಲ್ಲಿ ಮಹತ್ವದ ಸ್ಥಾನ ಗಳಿಸಿದೆ.

‘ವಿದ್ಯಾರ್ಥಿಗಳು ಪದವಿಗೆ ಹಾಗೂ ಸರ್ಟಿಫಿಕೆಟ್‌ಗೆ ಸೀಮಿತವಾಗಬಾರದು. ಇಂದಿನ ಕೈಗಾರಿಕಾ ಕ್ಷೇತ್ರಕ್ಕೆ ಅವಶ್ಯವಿರುವ ತಾಂತ್ರಿಕ ಕೌಶಲ ಹೊಂದಬೇಕು ಮತ್ತು ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುವ ಸಂಶೋಧನೆಯಲ್ಲಿ ತೊಡಗಬೇಕು’ ಎನ್ನುವುದು ಅಧ್ಯಕ್ಷ ಸುರೇಶ ಅಂಗಡಿ ಅವರ ಆಶಯವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT