ಮಂಗಳವಾರ, ಮಾರ್ಚ್ 9, 2021
28 °C
ಪ್ರೊ.ಅರವಿಂದ ಮಾಲಗತ್ತಿ ಹೇಳಿಕೆ

ದಾಸ ಬೇಡ: ಕನಕ ಸಾಕು: ಮಾಲಗತ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ದಾಸ ಎಂಬ ಪದಕ್ಕೆ ಹಲವು ಅರ್ಥಗಳಿವೆ. ಕನಕದಾಸ ಎಂದು ಕರೆಯುವ ಮೂಲಕ ಕನಕರನ್ನು ನಾವ್ಯಾಕೆ ಕುಬ್ಜಗೊ ಳಿಸಬೇಕು. ಕನಕರು ಹರಿದಾಸರಷ್ಟೇ ಅಲ್ಲ; ದ್ವೈತ, ಅದ್ವೈತ, ವಿಶಿಷ್ಟಾದ್ವೈತ, ಭಾಗವತವನ್ನು ತಿಳಿದಿದ್ದವರು’ ಎಂದು ಚಿಂತಕ ಪ್ರೊ.ಅರವಿಂದ ಮಾಲಗತ್ತಿ ಭಾನುವಾರ ಇಲ್ಲಿ ಅಭಿಪ್ರಾಯಪಟ್ಟರು.

ಕನಕದಾಸರ 533ನೇ ಜಯಂತಿಯಲ್ಲಿ ಮಾತನಾಡಿದ ಅವರು, ‘ಕನಕರು ಕೀರ್ತನೆಯನ್ನಷ್ಟೇ ರಚಿಸಿಲ್ಲ; ವಿದ್ವತ್‌ ಕಾವ್ಯವನ್ನು ಬರೆದಿದ್ದಾರೆ. ಒಂದೇ ದೈವ ಎನ್ನುವ ಬದಲು ಹಲವು ದೈವದ ಅಸ್ತಿತ್ವ ಪ್ರತಿಪಾದಿಸಿದ್ದಾರೆ. ಆದ್ದರಿಂದ ಕನಕದಾಸ ಎನ್ನುವ ಬದಲು ಕನಕ ವ್ಯಾಸ, ಕನಕರು ಎಂದರೆ ಸಾಕು’ ಎಂದು ವಾದ ಮಂಡಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು