ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಗುಲಾಮನಾಗಿ ಮೀಸಲಾತಿ ತೆಗೆಯುತ್ತೀಯಲ್ಲಪ್ಪಾ? ಇಬ್ರಾಹಿಂ

Last Updated 26 ಮಾರ್ಚ್ 2023, 18:17 IST
ಅಕ್ಷರ ಗಾತ್ರ

ಮೈಸೂರು: ‘1995ರಲ್ಲಿ ಎಚ್‌.ಡಿ.ದೇವೇಗೌಡ ಅವರು ಮುಖ್ಯಮಂತ್ರಿಯಾಗಿದ್ದಾಗ ಮುಸ್ಲಿಮರಿಗೆ ಶೇ 4ರಷ್ಟು ಮೀಸಲಾತಿ ನೀಡಿದ್ದರು. ಬೊಮ್ಮಣ್ಣ, ಆಗ ನಿಮ್ಮ ಅಪ್ಪನೊಂದಿಗೆ ನಾವೆಲ್ಲ ಇದ್ದೆವಪ್ಪ. ಇದೀಗ ನೀನು ಬಿಜೆಪಿಯ ಗುಲಾಮನಾಗಿ ಮೀಸಲಾತಿ ತೆಗೆಯುತ್ತೀಯಲ್ಲಪ್ಪ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಹರಿಹಾಯ್ದರು.

ಜೆಡಿಎಸ್‌ ಪಂಚರತ್ನ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ‘ಯಾಕೆ ಜಾತಿ– ಜಾತಿ ನಡುವೆ ಜಗಳ ಹಚ್ಚುವ ಕೆಲಸ ಮಾಡುತ್ತಿದ್ದೀಯಾ ಬೊಮ್ಮಣ್ಣ? ನೀತಿ ಸಂಹಿತೆ ಹೊಸ್ತಿಲಲ್ಲಿ ಮೀಸಲಾತಿ ರದ್ದು ಮಾಡಿ ಆದೇಶ ಹೊರಡಿಸಿದ್ದೀಯಾ. ನ್ಯಾಯಾಲಯದಲ್ಲಿ ಇದು ನಿಲ್ಲುವುದೇ’ ಎಂದು ಪ್ರಶ್ನಿಸಿದರು.

‘ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಶಿವಾಜಿನಗರದಲ್ಲಿ ಆದಿಚುಂಚನಗಿರಿ ಸ್ವಾಮೀಜಿ ಅವರನ್ನು ಸನ್ಮಾನಿಸಿದ್ದರು. ಸ್ವಾಮೀಜಿ ಬಳಿಯೇ ಅಲ್ಪಸಂಖ್ಯಾತರು ಮೀಸಲಾತಿ ಕೋರಿದ್ದರು. ಸ್ವಾಮೀಜಿ ದೇವೇಗೌಡರು ಕೊಡುತ್ತಾರೆ ಎಂದು ಆಶೀರ್ವಾದ ಮಾಡಿದ್ದರು. ದೇವೇಗೌಡರ ಶ್ರಮವನ್ನು ಇಂದು ಮುಸ್ಲಿಂ ಸಮಾಜ ಜ್ಞಾಪಿಸಿಕೊಳ್ಳಲಿದೆ’ ಎಂದರು.

‘ಮೀಸಲಾತಿ ರದ್ದತಿ ವಿರುದ್ಧ ಮಾರ್ಚ್‌ 27ರಂದು ಬೆಂಗಳೂರಿನಲ್ಲಿ ಸಾಂಕೇತಿಕ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT