ಭಾನುವಾರ, ಏಪ್ರಿಲ್ 2, 2023
33 °C

ಸೇನಾ ದಿನಾಚರಣೆ | ಶತ್ರುಗಳನ್ನು ಸದೆ ಬಡಿದ ಯೋಧರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಇಲ್ಲಿನ ಎಎಸ್‌ಸಿ ಕೇಂದ್ರದ ಮೈದಾನದಲ್ಲೂ ಭಾನುವಾರ ನಡೆದ ಸೇನಾ ದಿನಾಚರಣೆಯಲ್ಲಿ ಭಾರತೀಯ ಸೇನೆಯ ಶಕ್ತಿ ಅನಾವರಣಗೊಂಡಿತು.

ಎಂಇಜಿ ಕೇಂದ್ರದಲ್ಲಿ ಸೇನಾ ದಿನದ ಕಾರ್ಯಕ್ರಮದ ನಂತರ, ಸೇನೆಯ ಶೌರ್ಯ ಮತ್ತು ಸಾಹಸಮಯ ಪ್ರದರ್ಶನಗಳು ನಗರದ ಎಎಸ್‌ಸಿ ಕೇಂದ್ರದಲ್ಲಿ ನಡೆದವು.

ಕಾರ್ಯಕ್ರಮದ ಆರಂಭದಲ್ಲಿ ಅಶ್ವಾರೂಢ ಯೋಧರಿಂದ ಸಾಹಸ ಪ್ರದರ್ಶನ ನಡೆದವು. ಬಳಿಕ ಅತ್ಯಾಧುನಿಕ ಲಘು ಹೆಲಿಕಾಪ್ಟರ್‌, ಸೇನಾ ವೈಮಾನಿಕ ಹೆಲಿಕಾಪ್ಟರ್‌ಗಳು ಮತ್ತು ಸೇನೆಯ ಸಾಹಸ ವಿಭಾಗದ ಮೈಕ್ರೊಲೈಟ್ ಏರ್‌ಕ್ರಾಫ್ಟ್‌ಗಳ ಆಕರ್ಷಕ ಹಾರಾಟಕ್ಕೆ ಮೈದಾನ ಸಾಕ್ಷಿಯಾಯಿತು.

ಟೆಂಟ್ ಪೆಗ್ಗಿಂಗ್ ಮತ್ತು ಸಿಕ್ಸ್ ಬಾರ್ ಜಂಪಿಂಗ್ (ಆರು ಅಡೆತಡೆಗಳನ್ನು ಜಂಪ್ ಮಾಡುವುದು) ಸಾಹಸ ಚಟುವಟಿಕೆಗಳ ಪ್ರದರ್ಶನವೂ ನಡೆಯಿತು. ಯುದ್ಧ ಪ್ರದರ್ಶನ ಮತ್ತು ಮಿಲಿಟರಿಯ ಕೆಚ್ಚೆದೆಯ ಯೋಧರ ವಿಶೇಷ ತಂಡಗಳ ಕಾರ್ಯಾಚರಣೆಗಳು ಸೇರಿದ್ದವು. ಸಮರ ಕಲೆಗಳ ಪ್ರದರ್ಶಿಸಲಾಯಿತು. ಪ್ಯಾರಾ ತಂಡಗಳ 'ಸ್ಕೈಡೈವಿಂಗ್‌' ರೋಮಾಂಚನಗೊಳಿಸಿತು.

ಸ್ವದೇಶಿ ಯುದ್ಧ ಹೆಲಿಕಾಪ್ಟರ್‌ ರುದ್ರದಿಂದ ಜಿಗಿದು ಯೋಧರು ವೈರಿಗಳನ್ನು ಸದೆ ಬಡಿಯುವ ಸಾಹಸ ಮನಮೋಹಕವಾಗಿತ್ತು. ಎಎಸ್‌ಸಿ ಯೋಧರ ‘ಟೊರ್ನಾಡೋಸ್‌’ ತಂಡದ ಕೌಶಲ ಪ್ರೇಕ್ಷಕರಿಗೆ ರಸದೌತಣ ನೀಡಿತು. ಟೆಕ್ವಾಂಡೊ ಪ್ರದರ್ಶನ ತಂಡದ ಸಾಹಸಗಳು ಎಲ್ಲರನ್ನೂ ಆಕರ್ಷಿಸಿದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು