ಬೆಂಗಳೂರು: ಐದು ರಾಜ್ಯಗಳ ಚುನಾವಣೆಯಲ್ಲಿ ಸೋತಿರುವ ಕಾಂಗ್ರೆಸ್ ಕುರಿತು ಬಿಜೆಪಿಯ ರಾಜ್ಯ ಘಟಕವು ವ್ಯಂಗ್ಯವಾಡಿದೆ.

ಈ ಕುರಿತು ಭಾನುವಾರ ಟ್ವೀಟ್ ಮಾಡಿರುವ ಬಿಜೆಪಿ, ‘ಸ್ವಾತಂತ್ರ್ಯದ ಬಳಿಕ ಕಾಂಗ್ರೆಸ್ ವಿಸರ್ಜಿಸಿ ಎಂದು ಗಾಂಧೀಜಿ ಪ್ರತಿಪಾದಿಸಿದ್ದರು. ಆದರೆ, ನಕಲಿ ಗಾಂಧಿಗಳು, ನಕಲಿ ಕಾಂಗ್ರೆಸ್ಸಿಗರು ಗಾಂಧೀಜಿ ಮಾತಿಗೆ ಬೆಲೆ ಕೊಡಲಿಲ್ಲ. ಕಾಲವೇ ಎಲ್ಲದಕ್ಕೂ ಉತ್ತರ ನೀಡುತ್ತದೆ ಎಂಬಂತೆ ಈಗ ಜನರೇ ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸಿದ್ದಾರೆ. ಇನ್ನಾದರೂ ನಕಲಿ ಗಾಂಧಿ ಕುಟುಂಬ ಪೂಜಕರು ಬುದ್ದಿ ಕಲಿಯಬಹುದೇ?’ ಎಂದು ಬಿಜೆಪಿ ಪ್ರಶ್ನಿಸಿದೆ.

‘ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ಬಳಿಕ ಒಂದಷ್ಟು ಜನ ಸೋನಿಯಾ ಹಾಗೂ ಪ್ರಿಯಾಂಕಾ ಗಾಂಧಿ ಅವರ ರಾಜೀನಾಮೆ ಕೇಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ನೈತಿಕ ಹೊಣೆ ಎಂಬ ಶಬ್ದಕ್ಕೆ ಅರ್ಥವಿದೆಯೇ? ಅವರವರೇ, ಅವರ ಕುಟುಂಬದೊಳಗೆ ಜವಾಬ್ದಾರಿ ಹಂಚಿಕೊಳ್ಳುವ ವಾಸ್ತವತೆಯಲ್ಲಿ ನಕಲಿ ಗಾಂಧಿಗಳು ರಾಜೀನಾಮೆ ನೀಡುವುದು ಹೇಗೆ ಸಾಧ್ಯ?’ ಎಂದು ಬಿಜೆಪಿ ಕೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.