ಮಂಗಳವಾರ, ಜೂನ್ 28, 2022
23 °C

ಪಠ್ಯ ಪರಿಷ್ಕರಣೆ ವಿದೇಶಿ ತಳಿಯಾದ ಆರ್‌ಎಸ್‌ಎಸ್‌ ಮೆಚ್ಚಿಸಲೇ?: ಕಾಂಗ್ರೆಸ್‌

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಾಹಿತಿ ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ಪರಿಷ್ಕರಿಸಿದ್ದ ಪಠ್ಯಕ್ರಮವನ್ನೇ ಸಿಬಿಎಸ್‌ಇ 10 ಮತ್ತು 9ನೇ ತರಗತಿಗಳಿಗೆ ಕನ್ನಡ ವಿಷಯದ ಪಠ್ಯವಾಗಿ ಉಳಿಸಿಕೊಂಡಿರುವ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌, ಪಠ್ಯ ಪರಿಷ್ಕರಣೆಯು ವಿದೇಶಿ ತಳಿಯಾದ ಆರ್‌ಎಸ್ಎಸ್‌ ಮೆಚ್ಚಿಸುವ ಸಲುವಾಗಿಯೇ? ಎಂದು ಪ್ರಶ್ನಿಸಿದೆ.

'ಸಿಬಿಎಸ್‌ಇಗೆ ಪಠ್ಯ, ರಾಜ್ಯಕ್ಕೆ ಅಪಥ್ಯ!' ತಲೆಬರಹದ ಪ್ರಜಾವಾಣಿ ವರದಿಯನ್ನು ಉಲ್ಲೇಖಿಸಿ ಟ್ವೀಟ್‌ ಮಾಡಿರುವ ಕರ್ನಾಟಕ ಕಾಂಗ್ರೆಸ್‌, 'ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಬರಗೂರು ರಾಮಚಂದ್ರಪ್ಪ ಸಮಿತಿ ಪರಿಷ್ಕರಿಸಿದ್ದ ಪಠ್ಯವನ್ನೇ ಅಳವಡಿಸಿಕೊಂಡಿದೆ. ಹೀಗಿರುವಾಗ ರಾಜ್ಯ ಸರ್ಕಾರಕ್ಕೆ ಪರಿಷ್ಕರಣೆಯ ಹಠವೇಕೆ? ಎಂದಿದೆ.

'ಸುಳ್ಳುಗಳಿಂದ ಸಮರ್ಥಿಸುತ್ತಾ, ವಿವಾದ ಸೃಷ್ಟಿಸುತ್ತಾ ಪಠ್ಯಗಳಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿರುವುದೇಕೆ?' ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ಪರಿಷ್ಕರಿಸಿದ್ದ ಪಠ್ಯವನ್ನು ಸಿಬಿಎಸ್‌ಇನಲ್ಲಿ ಅಳವಡಿಸಿಕೊಂಡಿರುವಾಗ ಇದೇ ಪಠ್ಯದಲ್ಲಿನ ಹಲವು ಅಧ್ಯಾಯನಗಳನ್ನು ರಾಜ್ಯ ಸರ್ಕಾರ ನೇಮಿಸಿದ ಸಮಿತಿಯು ಕೈಬಿಡಲು ಶಿಫಾರಸು ಮಾಡಿರುವುದು ಶೈಕ್ಷಣಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು