ಶುಕ್ರವಾರ, ಸೆಪ್ಟೆಂಬರ್ 24, 2021
24 °C

ಬೆಂಬಲ ಎಂದರೆ ಬಿಜೆಪಿ ಜತೆಗೆ ಹೋಗುತ್ತೇವೆ ಎಂದಲ್ಲ: ಎಚ್‌.ಡಿ ರೇವಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ‘ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರಕ್ಕೆ ಸಂಕಷ್ಟ ಎದುರಾದರೆ ಜೆಡಿಎಸ್‌ ಬೆಂಬಲಕ್ಕೆ ನಿಲ್ಲಲಿದೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡರು ಹೇಳಿದ ಮಾತ್ರಕ್ಕೆ ಬಿಜೆಪಿ ಜತೆ ಹೋಗುತ್ತೇವೆ ಎಂದು ಅರ್ಥವಲ್ಲ’ ಎಂದು ಶಾಸಕ ಎಚ್‌.ಡಿ.ರೇವಣ್ಣ ಸೋಮವಾರ ಸ್ಪಷ್ಪಪಡಿಸಿದರು.

‘‌ಸರ್ಕಾರ ಬೀಳಿಸುವ ಉದ್ದೇಶ ಇಲ್ಲ. ರಾಜಕೀಯ ದ್ವೇಷ ಮಾಡದೇ ಉತ್ತಮ ಆಡಳಿತ ನೀಡಿದರೆ ಸಹಕಾರ ನೀಡಲಾಗುವುದು. ಬಿ.ಎಸ್‌.ಯಡಿಯೂರಪ್ಪ ಅವರಿಗೂ ಸಹಕಾರ ನೀಡಿದ್ದರೂ ರಾಜಕೀಯ ದ್ವೇಷ ಮಾಡಿದರು’ ಎಂದರು.

‘ಎಸ್‌.ಆರ್‌‌.ಬೊಮ್ಮಾಯಿ ಅವರೊಂದಿಗೆ ದೇವೇಗೌಡರು ಒಡನಾಟ ಹೊಂದಿದ್ದರು. ಅವರ ಪುತ್ರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನೆಗೆ ಭೇಟಿ ನೀಡಿದ್ದಾಗ ಎರಡು ವರ್ಷ ಉತ್ತಮ ಆಡಳಿತ ನೀಡುವಂತೆ ಗೌಡರು ಸಲಹೆ ನೀಡಿದರು’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು