ಬೆಂಗಳೂರು: ಕೊರೊನಾ ವೈರಾಣುವಿನ ರೂಪಾಂತರ ತಳಿ ಓಮೈಕ್ರಾನ್ ಸೋಂಕಿತ ವ್ಯಕ್ತಿಯ ನೇರ ಸಂಪರ್ಕಕ್ಕೆ ಬಂದ ಮತ್ತಿಬ್ಬರು ಕೋವಿಡ್ ಹೊಂದಿರುವುದು ಶುಕ್ರವಾರ ದೃಢಪಟ್ಟಿದೆ. ಇದರೊಂದಿಗೆ ಓಮೈಕ್ರಾನ್ ಸೋಂಕಿತರ ನೇರ ಸಂಪರ್ಕದಿಂದ ಕೋವಿಡ್ಗೆ ಒಳಗಾದವರ ಸಂಖ್ಯೆ ಏಳಕ್ಕೆ ಹೆಚ್ಚಿದೆ.

ಈ ಏಳೂ ಮಂದಿಯ ಮಾದರಿಯನ್ನು ಬಿಬಿಎಂಪಿಯು ಕೋವಿಡ್ ಪರೀಕ್ಷಾ ಮಾದರಿಗಳನ್ನು ವೈರಾಣು ವಂಶವಾಹಿ ಸಂರಚನೆ ವಿಶ್ಲೇಷಣೆಗೆ (ಜಿನೋಮ್ ಸೀಕ್ವೆನ್ಸಿಂಗ್) ಕಳುಹಿಸಿ ಕೊಟ್ಟಿದೆ.

‘ಇವರಲ್ಲಿ ಎಷ್ಟು ಮಂದಿಯಲ್ಲಿ ಒಮೈಕ್ರಾನ್ ಸೋಂಕು ಹೊಂದಿದ್ದಾರೆ ಎಂಬುದು ಜಿನೋಮ್ ಸೀಕ್ವೆನ್ಸಿಂಗ್ ಫಲಿತಾಂಶ ಕೈಸೇರಿದ ಬಳಿಕವೇ ತಿಳಿಯಲಿದೆ’ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಡಾ.ಕೆ.ವಿ.ತ್ರಿಲೋಕಚಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

ಓಮೈಕ್ರಾನ್ ಸೋಂಕಿತರಿಬ್ಬರ ನೇರ ಹಾಗೂ ಪರೋಕ್ಷ ಸಂಪರ್ಕಕ್ಕೆ ಬಂದ 482 ಮಂದಿಯನ್ನು ಬಿಬಿಎಂಪಿ ಗುರುತಿಸಿತ್ತು.

‘ಸೊಂಕಿತರ ಸಂಪರ್ಕಕ್ಕೆ ಬಂದ ಎಲ್ಲರನ್ನೂ ಪ್ರತ್ಯೇಕ ವಾಸಕ್ಕೆ ಒಳಪಡಿಸಿದ್ದೇವೆ. ಒಂದು ಮನೆಯನ್ನು ಕ್ಲಸ್ಟರ್ ಎಂದು ಗುರುತಿಸಿ ಸೀಲ್ಡೌನ್ ಮಾಡಿದ್ದೇವೆ’ ಎಂದು ತ್ರಿಲೋಕಚಂದ್ರ ತಿಳಿಸಿದರು.

ನಗರದಲ್ಲಿ ಕೋವಿಡ್ ಪತ್ತೆ ಪ್ರಮಾಣದಲ್ಲಿ ಹೆಚ್ಚೇನೂ ಏರಿಕೆ ಆಗಿಲ್ಲ. ಈಗಲೂ ಪರೀಕ್ಷೆಗೊಳಗಾದವರಲ್ಲಿ ಕೋವಿಡ್ ಪತ್ತೆ ದರವು ಶೇ 0.45ರಷ್ಟು ಮಾತ್ರ ಇದೆ. 154 ವಾರ್ಡ್ಗಳಲ್ಲಿ 10ಕ್ಕೂ ಅಧಿಕ ಕೋವಿಡ್ ಪ್ರಕರಣಗಳಿವೆ. 57 ಕಡೆ ಕಂಟೈನ್ಮೆಂಟ್ ಪ್ರದೇಶಗಳು ಸಕ್ರಿಯವಾಗಿವೆ. ಬೊಮ್ಮನಹಳ್ಳಿ (22) ಹಾಗೂ ಪೂರ್ವ (12) ವಲಯಗಳಲ್ಲಿ ಹೆಚ್ಚು ಪ್ರಕರಣಗಳಿವೆ.

‘ಸಂಪರ್ಕಕ್ಕೆ ಸಿಗದಿದ್ದವರಲ್ಲಿ ಆರು ಮಂದಿ ಪತ್ತೆ’

ದಕ್ಷಿಣ ಆಫ್ರಿಕಾವೂ ಸೇರಿದಂತೆ ವಿದೇಶಗಳಿಂದ ಬಂದು ಕ್ವಾರಂಟೈನ್ಗೆ ಒಳಗಾಗಿದ್ದ 57 ಮಂದಿಯಲ್ಲಿ 10 ಮಂದಿ ಸಂಪರ್ಕಕ್ಕೆ ಸಿಕ್ಕಿಲ್ಲದೇ ಇದ್ದುದು ಬಿಬಿಎಂಪಿ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿತ್ತು.

‘ದೂರವಾಣಿ ಸಂಪರ್ಕಕ್ಕೆ ಸಿಗದ 10 ಮಂದಿಯಲ್ಲಿ 6 ಮಂದಿಯನ್ನೂ ಈಗಾಗಲೇ ಪತ್ತೆ ಹಚ್ಚಿದ್ದೇವೆ. ಇನ್ನು ನಾಲ್ಕು ಮಂದಿಯ ಸುಳಿವು ಸಿಕ್ಕಿದೆ. ಶನಿವಾರ ಬೆಳಿಗ್ಗೆ ಒಳಗೆ ಅವರೆಲ್ಲರನ್ನೂ ಪತ್ತೆ ಹಚ್ಚಿ ಕೋವಿಡ್ ಪರೀಕ್ಷೆಗೆ ಒಳಪಡಿಸುತ್ತೇವೆ. ಅವರು ಹೊರಗೆ ಅಡ್ಡಾಡದಂತೆ ಕ್ರಮ ಕೈಗೊಳ್ಳುತ್ತೇವೆ’ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಿನೋಮ್ ಸೀಕ್ವೆನ್ಸಿಂಗ್: ಫಲಿತಾಂಶಕ್ಕೆ 2 ವಾರ ಕಾಯಬೇಕು’

ಕೋವಿಡ್ ದೃಢಪಟ್ಟವರ ಮಾದರಿಯ ಜಿನೋಮ್ ಸೀಕ್ವೆನ್ಸಿಂಗ್ನ ಫಲಿತಾಂಶವನ್ನು ಒಂದೆರಡು ದಿನಗಳಲ್ಲೇ ಪಡೆಯುವ ವ್ಯವಸ್ಥೆ ಇಲ್ಲದಿರುವುದು ಕೂಡಾ ಓಮೈಕ್ರಾನ್ ಹರಡುವುದನ್ನು ನಿಯಂತ್ರಿಸಲು ಸಮಸ್ಯೆಯಾಗಿ ಪರಿಣಮಿಸಿದೆ.

ಓಮೈಕ್ರಾನ್ ಸೊಂಕಿತರ ಸಂಪರ್ಕಕ್ಕೆ ಬಂದವರಲ್ಲಿ ಕೋವಿಡ್ ದೃಢಪಟ್ಟರೆ ರೋಗ ಲಕ್ಷಣ ಇಲ್ಲದಿದ್ದರೂ ಜಿನೋಮ್ ಸೀಕ್ವೆನ್ಸಿಂಗ್ ಫಲಿತಾಂಶ ಬರುವವರೆಗೂ ಅವರನ್ನು ಕ್ವಾರಂಟೈನ್ಗೆ ಒಳಪಡಿಸಬೇಕು. ಫಲಿತಾಂಶ ಬರುವುದರೊಳಗೆ ಅವರು ಕೋವಿಡ್ನಿಂದ ಗುಣಮುಖರಾದರೂ ಬಿಟ್ಟು ಕಳುಹಿಸುವಂತಿಲ್ಲ.

‘ಕೋವಿಡ್ ಪರೀಕ್ಷಾ ಮಾದರಿಗಳನ್ನು ವೈರಾಣು ವಂಶವಾಹಿ ಸಂರಚನೆ ವಿಶ್ಲೇಷಣೆಗೆ (ಜಿನೋಮ್ ಸೀಕ್ವೆನ್ಸಿಂಗ್) ಒಳಪಡಿಸುವ ಪದ್ಧತಿಯನ್ನು ಹಿಂದಿನಿಂದಲೂ ಅನುಸರಿಸುತ್ತಿದ್ದೆವು. ಈ ಹಿಂದೆ ಅದರ ಫಲಿತಾಂಶ ಬರುವುದಕ್ಕೆ ಎರಡು ತಿಂಗಳು ಸಮಯ ತಗುಲುತ್ತಿತ್ತು. ಏಪ್ರಿಲ್ನಲ್ಲಿ ಕಳುಹಿಸಿದ ಮಾದರಿಗಳ ಫಲಿತಾಂಶ ಜೂನ್ನಲ್ಲಿ ಬರುತ್ತಿತ್ತು. ಈಗ ಅಂತಹ ಪರಿಸ್ಥಿತಿ ಇಲ್ಲ. ಆದಷ್ಟು ಬೇಗ ಫಲಿತಾಂಶ ಪಡೆಯಲು ಕ್ರಮ ಕೈಗೊಂಡಿದ್ದೇವೆ. ಎರಡು ವಾರದೊಳಗೆ ಫಲಿತಾಂಶ ಬರುತ್ತಿದೆ. ವೈರಾಣು ಪ್ರಮಾಣ ಹೆಚ್ಚು ಇರುವ 10–15 ಮಾದರಿಗಳನ್ನು ಸೀಕ್ವೆನ್ಸಿಂಗ್ಗೆ ಕಳುಹಿಸುತ್ತಿದ್ದೇವೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.